2016ರ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ 'ದೇಶಿ ಗರ್ಲ್' ಪ್ರಿಯಾಂಕ ಚೋಪ್ರಾ
ಅಮೆರಿಕದ ಜನಪ್ರಿಯ ಧಾರವಾಹಿ 'ಕ್ವಾಂಟಿಕೊ'ದ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ ಬಾಲಿವುಡ್ ನಟಿ 'ದೇಶಿ ಗರ್ಲ್' ಪ್ರಿಯಾಂಕ...

Published On :
ನವದೆಹಲಿ: ಅಮೆರಿಕದ ಜನಪ್ರಿಯ ಧಾರವಾಹಿ 'ಕ್ವಾಂಟಿಕೊ'ದ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ ಬಾಲಿವುಡ್ ನಟಿ 'ದೇಶಿ ಗರ್ಲ್' ಪ್ರಿಯಾಂಕ ಚೋಪ್ರಾ ಅವರು ಇದೀಗ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಲು ರೇಡಿಯಾಗಿದ್ದಾರೆ.
33 ವರ್ಷದ ಪ್ರಿಯಾಂಕ 2016ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕ್ವಿನ್ಸ್ ಜೋನ್ಸ್, ರೀಸೆ ವಿದರ್ ಸ್ಪೂನ್, ಸ್ಟೀವ್ ಕ್ಯಾರೆಲ್, ಜೆ.ಕೆ. ಸಿಮ್ಮೊನ್ಸ್ ಹಾಗೂ ಜರೆಡ್ ಲೆಟೊ ಅವರೊಂದಿಗೆ ಪ್ರಿಯಾಂಕ ಆಸ್ಕರ್ ವೇದಿಕೆ ಅಲಂಕರಿಸಲಿದ್ದಾರೆ.
ಅಕಾಡೆಮಿ ಅವಾರ್ಡ್ ವೆಸ್ ಸೈಟ್ ನಲ್ಲಿ 88ನೇ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡುವ ಇತರೆ ಗಣ್ಯರ ಹೆಸರನ್ನು ಪ್ರಕಟಿಸಲಾಗಿದ್ದು, ಫೆಬ್ರವರಿ 28, ಭಾನುವಾರದಂದು ಎಬಿಸಿಯಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನೇರ ಪ್ರಸಾರವಾಗಲಿದೆ ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


