ಬಾಲಿವುಡ್

ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಈಗ ಏಷ್ಯಾದ ಸೆಕ್ಸಿ ಮಹಿಳೆ

ಬೆಂಗಳೂರು ಬೆಡಗಿ, ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಪ್ರಿಯಾಂಕ ಚೋಪ್ರಾ ಅವರನ್ನು ಹಿಂದಿಕ್ಕಿ 2016 ನೇ ಸಾಲಿನ...

ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಈಗ ಏಷ್ಯಾದ ಸೆಕ್ಸಿ ಮಹಿಳೆ
ದೀಪಿಕಾ ಪಡುಕೋಣೆ
Published On :
ಮುಂಬೈ: ಬೆಂಗಳೂರು ಬೆಡಗಿ, ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಪ್ರಿಯಾಂಕ ಚೋಪ್ರಾ ಅವರನ್ನು ಹಿಂದಿಕ್ಕಿ 2016 ನೇ ಸಾಲಿನ ‘ಏಷ್ಯಾದ ಮಾದಕ ಮಹಿಳೆ’ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಅವರು ಇದೇ ಮೊದಲ ಬಾರಿಗೆ ಏಷ್ಯಾದ ಸೆಕ್ಸಿ ಮಹಿಳೆ ಪಟ್ಟವನ್ನು ಅಲಂಕರಿಸಿದ್ದು, ಬ್ರಿಟನ್‌ ಮೂಲದ ‘ಈಸ್ಟರ್ನ್ ಐ’ ಪತ್ರಿಕೆ ಪ್ರತಿ ವರ್ಷದಂತೆ ಈ ವರ್ಷವು ಅತಿ ಹೆಚ್ಚು ಜನಪ್ರಿಯತೆ ಗಳಿಸಿದವರನ್ನು ಆಯ್ಕೆ ಮಾಡಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ದೀಪಿಕಾ, ‘ಸೆಕ್ಸಿ’ ಎಂಬ ಪದ ವಿವಿಧ ವರ್ಗದ ಜನರಿಗೆ ವಿವಿಧ ರೀತಿಯ ಆರ್ಥವನ್ನು ನೀಡುತ್ತದೆ. ನನ್ನ ಪ್ರಕಾರ ‘ಸೆಕ್ಸಿ’ ಎಂದರೇ ಅದು ಕೇವಲ ದೈಹಿಕವಾಗಿ ಸುಂದರವಾಗಿರುವುದಲ್ಲ, ಅದು ವಿಶ್ವಾಸಾರ್ಹತೆ, ಮುಗ್ಧತೆಯನ್ನು ತೋರ್ಪಡಿಸುವುದಾಗಿದೆ ಎಂದು ಹೇಳಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಸತತ ನಾಲ್ಕು ಬಾರಿ ಏಷ್ಯಾದ ಸೆಕ್ಸಿ ಮಹಿಳೆ ಪಟ್ಟ ಅಲಂಕರಿಸಿದ್ದರು. ಈ ಬಾರಿ ಅಗ್ರ ಹತ್ತು ಸ್ಥಾನಗಳ ಪೈಕಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.ನಿಯಾ ಶರ್ಮಾ, ಡಾರ್ಸತಿ ಧಮ್ಮಿ ಮೂರು ಮತ್ತು ನಾಲ್ಕನೆ ಸ್ಥಾನ ಪಡೆದರೆ, ಐದನೇ ಸ್ಥಾನದಲ್ಲಿ ಅಲಿಯಾ ಭಟ್‌ ಕಾಣಿಸಿಕೊಂಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಮಂದಿ ಮಾಡಿರುವ ವೋಟ್‌ಗಳನ್ನು ಆಧಾರಿಸಿ ದೀಪಿಕಾ ಅವರನ್ನು 2016 ನೇ ಸಾಲಿನ ‘ಏಷ್ಯಾದ ಮಾದಕ ಮಹಿಳೆ’ ಎಂದು ಘೋಷಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.