ಬಾಲಿವುಡ್

ನಾನು 80 ತುಂಬುವವರೆಗೂ ನಟನೆ ಮುಂದುವರೆಸುತ್ತೇನೆ: ಕರೀನಾ

ಗರ್ಭಿಣಿಯಾಗಿರುವಾಗಲು ಕೆಲಸ ಮಾಡುವ ತಮ್ಮ ನಂಬಿಕೆಯ ಬಗ್ಗೆ ಇತ್ತೀಚೆಗಷ್ಟೇ ತೆರೆದುಕೊಂಡಿದ್ದ ಬಾಲಿವುಡ್ ನಟಿ ಕರೀನಾ ಕಪೂರ್, ತಮ್ಮ 80 ನೆಯ ವಯಸ್ಸಿನವರೆಗೆ ನಟನೆ ಮುಂದುವರೆಸುವ

ನಾನು 80 ತುಂಬುವವರೆಗೂ ನಟನೆ ಮುಂದುವರೆಸುತ್ತೇನೆ: ಕರೀನಾ
ಬಾಲಿವುಡ್ ನಟಿ ಕರೀನಾ ಕಪೂರ್
Published On :
ನವದೆಹಲಿ: ಗರ್ಭಿಣಿಯಾಗಿರುವಾಗಲು ಕೆಲಸ ಮಾಡುವ ತಮ್ಮ ನಂಬಿಕೆಯ ಬಗ್ಗೆ ಇತ್ತೀಚೆಗಷ್ಟೇ ತೆರೆದುಕೊಂಡಿದ್ದ ಬಾಲಿವುಡ್ ನಟಿ ಕರೀನಾ ಕಪೂರ್, ತಮ್ಮ 80 ನೆಯ ವಯಸ್ಸಿನವರೆಗೆ ನಟನೆ ಮುಂದುವರೆಸುವ ಇರಾದೆ ಇದೆ ಎಂದು ಹೇಳಿದ್ದಾರೆ. 
ನಟನೆಯ ಬಗ್ಗೆ ತಮ್ಮ ಪ್ರೀತಿಯನ್ನು ಮತ್ತೆ ವಿಶದಪಡಿಸಿರುವ 35 ವರ್ಷದ ನಟಿ "ನಾನು ನನ್ನ ಕೆಲಸ ಇಷ್ಟಪಡುತ್ತೇನೆ. ನನ್ನ ತಾಯಿಯ ಗರ್ಭದಲ್ಲಿ ಇದ್ದಾಗಿಲಿಂದಲೂ ನನಗೆ ನಟಿಯಾಗುವ ಆಸೆಯಿತ್ತು, ಆದುದರಿಂದ ನಟನೆಯನ್ನು 80 ತುಂಬುವವರೆಗೂ ಮುಂದುವರೆಸಲಿದ್ದೇನೆ" ಎಂದಿದ್ದಾರೆ. 
ಕರೀನಾ ಗರ್ಭಿಣಿಯಾಗಿರುವಾಗ ನಟಿಸುವರೇ ಅಥವಾ ಇಲ್ಲವೇ ಎಂಬ ವದಂತಿಗಳು ಬಾಲಿವುಡ್ ನಲ್ಲಿ ಬಹು ಚರ್ಚಿತ ಮಾತುಕತೆಗಳಾಗಿದ್ದವು. 
ಇದಕ್ಕೆ ಪ್ರತಿಕ್ರಿಯಿಸಿದ್ದ 'ಕಿ ಅಂಡ್ ಕ' ನಟಿ "ನಾವು ಗರ್ಭಿಣಿಯಾಗಿರುವಾಗ ಕೆಲಸ ಮಾಡಲಾಗುವುದಿಲ್ಲ ಎಂಬುದು ಪುರಾಣ ಎಂದಿದ್ದ ಅವರು ಹೀಗಿದ್ದೂ ನಾನು ವಿರಮಿಸುತ್ತಿದ್ದೇನೆ" ಎಂದಿದ್ದರು. 
ಶೀಘ್ರ ತಾಯಿಯಾಗಲಿರುವ ಕರೀನಾ ತನ್ನ ಮಗುವಿಗಾಗಿ ಏನೇನು ಶಾಪಿಂಗ್ ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ "ನೀವುಗಳು ಈಗಾಗಲೇ ನಿರ್ಧರಿಸಿದ್ದೀರಿ, ಏನಾಗಬೇಕು, ಎಲ್ಲಿ ಆಗಬೇಕು ಮತ್ತು ನಾನು ಎಷ್ಟು ವ್ಯಯಿಸಬೇಕು ಎಂಬುದನ್ನು" ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.