ಬಾಲಿವುಡ್

ಒಂದೇ ವೇದಿಕೆಯಲ್ಲಿ ಆಮೀರ್ ಖಾನ್ ರ ಮಾಜಿ, ಹಾಲಿ ಪತ್ನಿಯರು

ನಟ ಆಮಿರ್ ಖಾನ್ ಪರ್ಫೆಕ್ಷನಿಸ್ಟ್ ಅಂತಲೇ ಬಾಲಿವುಡ್ ಹಿರಿತೆರೆಯಲ್ಲಿ ನಲ್ಲಿ ಫೇಮಸ್ಸು. ಇನ್ನು ಕಿರುತೆರೆಯಲ್ಲಿ ಸತ್ಯಮೇವ ಜಯತೇ ಕಾರ್ಯಕ್ರಮ ...

ಒಂದೇ ವೇದಿಕೆಯಲ್ಲಿ ಆಮೀರ್ ಖಾನ್ ರ ಮಾಜಿ, ಹಾಲಿ ಪತ್ನಿಯರು
ಮುಂಬೈಯಲ್ಲಿ ನಡೆದ ಸತ್ಯಮೇವ ಜಯತೇ ವಾಟರ್ ಕಪ್ ಅವಾರ್ಡ್ಸ್ 2016 ಕಾರ್ಯಕ್ರಮದಲ್ಲಿ ಕಿರಣ್ ರಾವ್, ಆಮೀರ್ ಖಾನ್, ರೀನಾ ದತ್ತಾ
Published On :
ಮುಂಬೈ: ನಟ ಆಮಿರ್ ಖಾನ್ ಪರ್ಫೆಕ್ಷನಿಸ್ಟ್ ಅಂತಲೇ ಬಾಲಿವುಡ್  ಹಿರಿತೆರೆಯಲ್ಲಿ ನಲ್ಲಿ ಫೇಮಸ್ಸು. ಇನ್ನು ಕಿರುತೆರೆಯಲ್ಲಿ  ಸತ್ಯಮೇವ ಜಯತೇ ಕಾರ್ಯಕ್ರಮ ನಡೆಸಿಕೊಟ್ಟು ಕೂಡ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಕಾರ್ಯಕ್ರಮ ಮುಖೇನ ಹಲವು ಸಮಾಜಮುಖಿ ಕೆಲಸಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. 
ಪಾನಿ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿ ಮಹಾರಾಷ್ಟ್ರ ರಾಜ್ಯದಲ್ಲಿ ನೀರಿನ ಅಭಾವ, ಜಲ ರಕ್ಷಣೆ ಕುರಿತು ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸಿ ಅರಿವು ಮೂಡಿಸುತ್ತಿದ್ದಾರೆ.ಹಲವು ಉಪಯುಕ್ತ ಕೆಲಸಗಳನ್ನು ಮಾಡುತ್ತಿದ್ದಾರೆ. ಅದರ ಭಾಗವಾಗಿ ಮೊನ್ನೆ 15ರಂದು ಸ್ವಾತಂತ್ರ್ಯ ದಿನಾಚರಣೆ ದಿನ ಮುಂಬೈಯಲ್ಲಿ ಸತ್ಯಮೇವ ಜಯತೇ ವಾಟರ್ ಕಪ್ ಅವಾರ್ಡ್ಸ್ 2016’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಳೆ ನೀರು ಕೊಯ್ಲು ವಿಧಾನ ಅನುಸರಿಸಿ ಅತಿ ಹೆಚ್ಚು ನೀರು ಶೇಖರಿಸಿದ ಹಳ್ಳಿಗಳ ನಡುವೆ ಏಪ್ರಿಲ್ 20ರಿಂದ ಜೂನ್ 5ರವರೆಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಹೀಗೆ ಅತಿ ಹೆಚ್ಚು ನೀರು ಶೇಖರಿಸಿಟ್ಟ ಮಹಾರಾಷ್ಟ್ರದ ವೇಲುವಳ್ಳಿ 50 ಲಕ್ಷ ರೂಪಾಯಿ ಮೊದಲ ನಗದು ಬಹುಮಾನ ಪಡೆದರೆ, ಖಪರ್​ಟೋನ್ ಮತ್ತು ಜೈಗಾವ್ ಊರುಗಳು ಎರಡನೇ ಸ್ಥಾನದಲ್ಲಿ ತಲಾ 30 ಲಕ್ಷ ರೂಪಾಯಿ ನಗದು ಬಹುಮಾನ ಪಡೆದವು, ರಾಡಿ ತಾಂಡಾ ಹಾಗೂ ವಥೋಡಾ ಗ್ರಾಮಗಳು ಮೂರನೇ ಸ್ಥಾನದಲ್ಲಿ ತಲಾ 20 ಲಕ್ಷ ರೂಪಾಯಿ ಪಡೆದವು. ಈ ಬಾರಿ ಕೇವಲ 3 ಜಿಲ್ಲೆಗಳಲ್ಲಷ್ಟೇ ಸ್ಪರ್ಧೆ ನಡೆಸಿದ್ದು, ಮುಂದಿನ ವರ್ಷಗಳಲ್ಲಿ 30 ಜಿಲ್ಲೆಗಳಿಗೆ ಈ ಸ್ಪರ್ಧೆಯನ್ನು ವಿಸ್ತರಿಸುವ ಇರಾದೆ ಆಮಿರ್ ಖಾನ್ ಅವರದು.
ಕಾರ್ಯಕ್ರಮದ ವಿಶೇಷ ಹೈಲೈಟ್ ಅಮೀರ್ ಖಾನ್ ಅವರ ಮೊದಲ, ಮಾಜಿ ಪತ್ನಿ ರೀನಾ ದತ್ತಾ ಹಾಗೂ ಈಗಿನ ಪತ್ನಿ ಕಿರಣ್ ರಾವ್ ಭಾಗವಹಿಸಿದ್ದು. ಜತೆಗೆ ಪುತ್ರಿ ಇರಾ ಕೂಡ ವೇದಿಕೆ ಮೇಲೆ ಪೋಷಕರ ಸಹಾಯಕ್ಕೆ ನಿಂತಿದ್ದು ಮತ್ತೊಂದು ವಿಶೇಷ. 1986ರಲ್ಲಿ ರೀನಾ ಅವರನ್ನು ಮದುವೆಯಾಗಿದ್ದ ಆಮಿರ್, 16 ವರ್ಷಗಳ ದಾಂಪತ್ಯ ಜೀವನದ ಬಳಿಕ 2002ರಲ್ಲಿ ಅವರಿಗೆ ವಿಚ್ಛೇದನ ನೀಡಿದ್ದರು. ನಂತರ 2005ರಲ್ಲಿ ಆಮಿರ್ ಬೆಂಗಳೂರು ಮೂಲದ ಕಿರಣ್ ರಾವ್ ಅವರನ್ನು ವರಿಸಿದ್ದರು.
ಮಾಜಿ ಮತ್ತು ಹಾಲಿ ಪತ್ನಿಯರಿಬ್ಬರು ವೇದಿಕೆಯಲ್ಲಿ ಡ್ಯಾನ್ಸ್ ವೊಂದಕ್ಕೆ ಹೆಜ್ಜೆ ಹಾಕಿದ್ದು ನೋಡುಗರನ್ನು ಅಚ್ಚರಿಗೊಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.