ಬಾಲಿವುಡ್

ಬಿಡುಗಡೆಗೂ ಮುನ್ನ 60 ಕೋಟಿ ಸಂಪಾದಿಸಿದ ಹೃತಿಕ್ 'ಮೆಹೆಂಜೋದಾರೋ'

ಬಾಲಿವುಡ್ ನ ಬಹುನಿರೀಕ್ಷಿತ ಹೃತಿಕ್ ರೋಷನ್ ಅಭಿನಯದ ಮೆಹೆಂಜೋ ದಾರೋ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಗಳಿಕೆ ಮಾಡಿದೆ...

ಬಿಡುಗಡೆಗೂ ಮುನ್ನ 60 ಕೋಟಿ ಸಂಪಾದಿಸಿದ ಹೃತಿಕ್ 'ಮೆಹೆಂಜೋದಾರೋ'
ಹೃತಿಕ್ ರೋಷನ್
Published On :

ಬಾಲಿವುಡ್ ನ ಬಹುನಿರೀಕ್ಷಿತ ಹೃತಿಕ್ ರೋಷನ್ ಅಭಿನಯದ ಮೆಹೆಂಜೋ ದಾರೋ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಗಳಿಕೆ ಮಾಡಿದೆ.

ಆಗಸ್ಟ್ 12ರ ವರಮಹಾಲಕ್ಷ್ಮಿ ಹಬ್ಬದ ದಿನ ಬಿಡುಗಡೆಯಾಗುತ್ತಿರುವ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿದೆ. ಚಿತ್ರವನ್ನು ಲಗಾನ್ ಖ್ಯಾತಿಯ ಅಶುತೋಷ್ ಗೌರಿಕ್ಕರ್ ನಿರ್ದೇಶಿಸಿದ್ದು, ಚಿತ್ರದ ಸ್ಯಾಟಲೈಟ್ ಹಕ್ಕು 45 ಕೋಟಿ ಹಾಗೂ ಸಂಗೀತದ ಹಕ್ಕು 15 ಕೋಟಿಗೆ ಸೇಲಾಗಿದ್ದು ಬರೋಬ್ಬರಿ 60 ಕೋಟಿ ರುಪಾಯಿ ಸಂಪಾದಿಸಿದೆ.

ಪ್ರಚಾರ ಮತ್ತು ಜಾಹೀರಾತು ಸೇರಿದಂತೆ ಚಿತ್ರದ ಬಜೆಟ್ ಒಟ್ಟು 115 ಕೋಟಿ ಎಂದು ಹೇಳಲಾಗುತ್ತಿದೆ.

ಮೆಹೆಂಜೋದಾರೋ ಹಾಗೂ ಅಕ್ಷಯ್ ಕುಮಾರ್ ಅಭಿನಯದ ರಸ್ತುಂ ಚಿತ್ರ ದೇಶಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು ಎರಡು ಚಿತ್ರಗಳ ತೀವ್ರ ಪೈಪೋಟಿ ಎದುರಾಗಿದೆ. ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ಖಾನ್, ರಣ್ವೀರ್ ಸಿಂಗ್ ಸೇರಿದಂತೆ ಇತರ ಸ್ಟಾರ್ ಗಳು ಸಾಮಾಜಿಕ ಜಾಲತಾಣದಲ್ಲಿ ರಸ್ತುಂ ಚಿತ್ರವನ್ನು ಪ್ರಮೋಟ್ ಮಾಡಿದ್ದಾರೆ. ಆದರೆ ಮೆಹೆಂಜೋದಾರೋ ಚಿತ್ರಕ್ಕೆ ಈ ಮಟ್ಟದ ಬೆಂಬಲ ಸಿಗದಿದ್ದರು. ಚಿತ್ರ ಬಿಡುಗಡೆಗೂ ಮುನ್ನ 60 ಕೋಟಿ ಸಂಪಾದಿಸಿದೆ.

ಚಿತ್ರದಲ್ಲಿ ಕನ್ನಡತಿ ಪೂಜಾ ಹೆಗ್ಡೆ ಹಾಗೂ ಹೃತಿಕ್ ರೋಶನ್ ಅಭಿನಯಿಸಿದ್ದು, ಈ ಚಿತ್ರ ಸಿಂಧು ಕಣಿವೆ ನಾಗರೀಕತೆಯ ಅಂಶಗಳ ಆಧಾರದ ಮೇಲೆ ಪ್ರೇಮ ಹಾಗೂ ಸಾಹಸ ಪ್ರಧಾನ ಅಂಶಗಳನ್ನು ಒಳಗೊಂಡ ಥ್ರಿಲ್ಲರ್ ಚಿತ್ರಿವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.