'ರಾಮನ್ ರಾಘವ್ ೨.೦' ಮೂಲಕ ಅನುರಾಗ್ ಕಶ್ಯಪ್ ಫಾರ್ಮ್ ಗೆ ಹಿಂದಿರುಗಲಿದ್ದಾರೆ: ನವಾಜುದ್ದೀನ್
ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಕೊನೆಯ ಚಿತ್ರ 'ಬಾಂಬೆ ವೆಲ್ವೆಟ್' ಹುಟ್ಟಿಸಿದ್ದ ನಿರೀಕ್ಷೆಗಳನ್ನು ಉಳಿಸಿಕೊಳ್ಳಲು ವಿಫಲವಾಗಿರಬಹುದು ಆದರೆ ನಿರ್ದೇಶಕನ ಗೆಳೆಯ ಮತ್ತು ನಟ ನವಾಜುದ್ದೀನ್ ಸಿದ್ದಿಕಿ

ಮುಂಬೈ: ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಕೊನೆಯ ಚಿತ್ರ 'ಬಾಂಬೆ ವೆಲ್ವೆಟ್' ಹುಟ್ಟಿಸಿದ್ದ ನಿರೀಕ್ಷೆಗಳನ್ನು ಉಳಿಸಿಕೊಳ್ಳಲು ವಿಫಲವಾಗಿರಬಹುದು ಆದರೆ ನಿರ್ದೇಶಕನ ಗೆಳೆಯ ಮತ್ತು ನಟ ನವಾಜುದ್ದೀನ್ ಸಿದ್ದಿಕಿ ಪ್ರಕಾರ 'ರಾಮನ್ ರಾಘವ್ ೨.೦' ಮೂಲಕ ಅನುರಾಗ್ ಕಶ್ಯಪ್ ಫಾರ್ಮ್ ಗೆ ಹಿಂದಿರುಗಲಿದ್ದಾರೆ ಎಂದಿದ್ದಾರೆ.
ಸೈಕೋ ರಾಘವ ಎಂದೆ ಹೆಸರಾಗಿದ್ದ ರಾಮನ್ ರಾಘವ್ ೬೦ ರ ದಶಕದ ಮುಂಬೈನ ಸರಣಿ ಕೊಲೆಗಾರ.
ಕೊಲೆಗಾರ ರಾಘವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಶಸ್ತಿ ವಿಜೇತ ನಟ ನವಾಜುದ್ದೀನ್ ಇದು ಕಶ್ಯಪ್ ಅವರ ಅತ್ಯುತ್ತಮ ಸಿನೆಮಾಗಳಲ್ಲೊಂದು ಎಂದಿದ್ದಾರೆ.
"ರಾಮನ್ ರಾಘವ್ ಮೂಲಕ ಅನುರಾಗ್ ಕಶ್ಯಪ್ ಖಂಡಿತ ಮತ್ತೆ ಮಿಂಚಲಿದ್ದಾರೆ. ಅದರ ಬಗ್ಗೆ ನನಗೆ ವಿಶ್ವಾಸವಿದೆ. ಇದು ಅವರ ಅತ್ಯುತ್ತಮ ಸಿನೆಮಾಗಳಲ್ಲಿ ಒಂದು ಎಂದು ವಿಶ್ವಾಸದಿಂದ ಹೇಳಬಲ್ಲೆ. ಇದಕ್ಕಾಗಿ ಅವರು ಬಹಳ ಬೆವರು ಸುರಿಸಿದ್ದಾರೆ" ಎಂದು ಕೂಡ ನವಾಜುದ್ದೀನ್ ಹೇಳಿದ್ದಾರೆ.
೪೧ ವರ್ಷದ ನಟ ಈ ಮೊದಲು ಕಶ್ಯಪ್ ಅವರ 'ಬ್ಲಾಕ್ ಫ್ರೈಡೆ' ಮತ್ತು 'ಗ್ಯಾಂಗ್ಸ್ ಆಫ್ ವಸೀಪುರ್' ಸಿನೆಮಾಗಳಲ್ಲೂ ಕೆಲಸ ಮಾಡಿದ್ದಾರೆ.
"ಅನುರಾಗ್ ಜೊತೆಗೆ ಕೆಲಸ ಮಾಡುವುದೆಂದರೆ ಹೊಸದನ್ನು ಮತ್ತು ಗೊತ್ತಿಲ್ಲದ್ದನ್ನು ಹುಡುಕುವ ಅನುಭವ. ಅದು 'ದೇವ್ ಡಿ' ನಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವುದಾಗಲೀ ಅಥವಾ ರಾಮನ್ ರಾಘವ್ ಪಾತ್ರವಾಗಲಿ ಅನಿರೀಕ್ಷಿತವಾದದ್ದನ್ನು ಅವರು ನನಗೆ ನೀಡುತ್ತಾರೆ" ಎಂದು ನಿರ್ದೇಶಕರನ್ನು ಮನಸಾರೆ ಹೊಗಳಿದ್ದಾರೆ.
ವಿಕಿ ಕೌಶಲ್ ಕೂಡ ನಟಿಸಿರುವ 'ರಾಮನ್ ರಾಘವ್ ೨.೦' ಕಾನ್ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಕೂಡ ಪ್ರದರ್ಶನ ಕಾಣಲಿದೆ. ಮತ್ತು ದೇಶದಾದ್ಯಂತ ಜೂನ್ ೨೪ಕ್ಕೆ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


