ಹೃತಿಕ್ ರೋಷನ್ ಗೆ ಕಂಗನಾ ಜೊತೆ ಅಫೇರ್ ಇರಲಿಲ್ಲ ಅಂತ ಸಾಬೀತುಪಡಿಸುತ್ತೇವೆ: ವಕೀಲರು
ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಅವರ ವಕೀಲರು ನಟಿ ಕಂಗನಾ ರನೌತ್ ವಿರುದ್ಧದ ಕಾನೂನು ಸಮರದಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳು...

Published On :
ನವದೆಹಲಿ: ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಅವರ ವಕೀಲರು ನಟಿ ಕಂಗನಾ ರನೌತ್ ವಿರುದ್ಧದ ಕಾನೂನು ಸಮರದಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ನನ್ನ ಕಕ್ಷಿದಾರ ಹೃತಿಕ್ ರೋಷನ್ ಕಂಗನಾ ಜೊತೆ ಸಂಬಂಧ ಹೊಂದಿರಲಿಲ್ಲ ಎಂಬುದನ್ನು ನಾವು ಸಾಬೀತು ಮಾಡುತ್ತೇವೆ ಎಂದು ಅವರ ವಕೀಲರು ಹೇಳಿದ್ದಾರೆ.
ಸತ್ಯಾಂಶ ಏನು ಎಂಬುದನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದೇವೆ. ಈ ಮಾತಿನ ಸಮರದಲ್ಲಿ ಯಾರೂ ಗೊಂದಲಕ್ಕೆ ಒಳಗಾಗಬೇಕಿಲ್ಲ. ನಮ್ಮ ಕಕ್ಷಿದಾರ ಕಂಗನಾ ಅವರೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂಬುದುನ್ನು ನಾವು ಸಾಬೀತುಪಡಿಸುತ್ತೇವೆ. ಇದಕ್ಕೆ ಸಂಬಂಧಿಸಿದ ಬಲವಾದ ಸಾಕ್ಷ್ಯಾಧಾರಗಳನ್ನು ನಾವು ತನಿಖಾ ಅಧಿಕಾರಿಗಳಿಗೆ ನೀಡಿದ್ದೇವೆ ಎಂದು ಹೃತಿಕ್ ರೋಷನ್ ಅವರ ವಕೀಲರು ಐಎಎನ್ ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅವರು ಸಹ ಅಪೇರ್ ಇತ್ತು ಎಂಬದುಕ್ಕೆ ಏನಾದರೂ ಸಾಕ್ಷ್ಯಗಳಿದ್ದರೆ ತನಿಖಾಧಿಕಾರಿಗಳಿಗೆ ನೀಡಲಿ ಎಂದು ವಕೀಲರು ಹೇಳಿದ್ದಾರೆ. ಅಲ್ಲದೆ ನಾವು ಇಲ್ಲಿ ನೋಟಿಸ್ ಹಾಗೂ ಪ್ರತಿ ನೋಟಿಸ್ ನೀಡುವ ಆಟವಾಡುತ್ತಿಲ್ಲ. ಸತ್ಯಾಂಶವನ್ನು ಹೊರ ತರಲು ಕಾನೂನು ಹೋರಾಟ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲವು ದಿನಗಳ ಹಿಂದ ನಟಿ ಕಂಗನಾ ರನೌತ್ ಅವರು 42 ವರ್ಷದ ನಟ ಹೃತಿಕ್ ಅವರು ತನ್ನ ಖಾಸಗಿ ಚಿತ್ರಗಳನ್ನು ವಿತರಿಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ ಆರೋಪಿ ನಟನನ್ನು ಕೂಡಲೇ ಬಂಧಿಸುವಂತೆ ಮನವಿ ಮಾಡಿದ್ದರು.
ಕೆಲವು ದಿನಗಳ ಹಿಂದೆ ತಮ್ಮ ಅಫೇರ್ ಬಗ್ಗೆ ಪರಸ್ಪರ ಲೀಗಲ್ ನೋಟಿಸ್ ಕೊಟ್ಟುಕೊಂಡಿದ್ದ ಬಾಲಿವುಡ್ ತಾರೆಯರು, ತನಗೆ ಹೃತಿಕ್ ಜತೆ ಅಫೇರ್ ಇದ್ದದ್ದು ನಿಜ ಎಂದು ಸಂದರ್ಶನದಲ್ಲಿ ಹೇಳಿದ್ದ ಕಂಗನಾ ತಮ್ಮ ಹೇಳಿಕೆ ವಾಪಸ್ ಪಡೆಯುವಂತೆ ಹೃತಿಕ್ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ಸಹ ಲೀಗಲ್ ನೋಟಿಸ್ ಕಳುಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


