ಕಾನ್ ೨೦೧೬ರಲ್ಲಿ ಲಾರಿಯಲ್ ಪ್ಯಾರಿಸ್ ಪ್ರತಿನಿಧಿಸಲಿರುವ ಸೋನಂ-ಐಶ್ವರ್ಯ
ಮುಂಬರಲಿರುವ ೬೯ನೇ ಕಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಲಂಕಾರಿಕ ದೈತ್ಯ ಸಂಸ್ಥೆ ಲಾರಿಯಲ್ ಪ್ಯಾರಿಸ್ ಪ್ರಚಾರ ರಾಯಭಾರಿಗಳಾಗಿ ಬಾಲಿವುಡ್ ನಟಿಯರಾದ ಸೋನಂ ಕಪೂರ್

ಮುಂಬೈ: ಮುಂಬರಲಿರುವ ೬೯ನೇ ಕಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಲಂಕಾರಿಕ ದೈತ್ಯ ಸಂಸ್ಥೆ ಲಾರಿಯಲ್ ಪ್ಯಾರಿಸ್ ಪ್ರಚಾರ ರಾಯಭಾರಿಗಳಾಗಿ ಬಾಲಿವುಡ್ ನಟಿಯರಾದ ಸೋನಂ ಕಪೂರ್ ಮತ್ತು ಐಶ್ವರ್ಯ ರಾಯ್ ಬಚ್ಚನ್ ಭಾಗವಹಿಸಲಿದ್ದಾರೆ.
ಕಳೆದ ವರ್ಷವೂ ಚಲನಚಿತ್ರೋತ್ಸವ ಕೆಂಪು ಹಾಸಿನ ಮೇಲೆ ಸೋನಂ ಈ ಉತ್ಪನ್ನದ ಪ್ರತಿನಿಧಿಯಾಗಿ ನಡೆದಿದ್ದರು. ಈ ಇಬ್ಬರೂ ಯಾವ ದಿನ ರೆಡ್ ಕಾರ್ಪೆಟ್ ಮೇಲೆ ನಡೆಯಲಿದ್ದಾರೆ ಎಂಬುದು ಇನ್ನು ನಿಶ್ಚಿತವಾಗಿಲ್ಲ.
ಮೇ ೧೧ ರಿಂದ ಮೇ ೨೨ ರವರೆಗೆ ೨೦೧೬ ರ ಕಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಜರುಗಲಿದೆ.
ಸೋನಂ ಇತ್ತೀಚೆಗಷ್ಟೇ ರಾಮ್ ಮಾಧ್ವಾನಿ ಅವರ ಬಯೋಪಿಕ್-ಥ್ರಿಲ್ಲರ್ 'ನೀರ್ಜಾ'ದಲ್ಲಿ ಕಾಣಿಸಿಕೊಂಡಿದ್ದರು. ಐಶ್ವರ್ಯ ಮೇ ೨೦ ರಂದು ಬಿಡುಗಡೆಯಾಗುವ 'ಸರಬ್ಜಿತ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


