'ಉಡ್ತಾ ಪಂಜಾಬ್' ಟ್ರೇಲರ್: ಅಲಿಯಾ, ಶಾಹಿದ್ ಮತ್ತು ಕರೀನಾಗೆ ಹೃತಿಕ್ ಪ್ರಶಂಸೆ
ಆಲಿಯಾ ಭಟ್, ಶಾಹಿದ್ ಕಪೂರ್ ಮತ್ತು ಕರಿನಾ ಕಪೂರ್ ನಟಿಸಿರುವ ಅಭಿಷೇಕ್ ಚೌಬೆ ನಿರ್ದೇಶನದ 'ಉಡ್ತಾ ಪಂಜಾಬ್' ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅತೀವ ಜನಪ್ರಿಯವಾಗಿದೆ.

ಮುಂಬೈ: ಆಲಿಯಾ ಭಟ್, ಶಾಹಿದ್ ಕಪೂರ್ ಮತ್ತು ಕರಿನಾ ಕಪೂರ್ ನಟಿಸಿರುವ ಅಭಿಷೇಕ್ ಚೌಬೆ ನಿರ್ದೇಶನದ 'ಉಡ್ತಾ ಪಂಜಾಬ್' ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅತೀವ ಜನಪ್ರಿಯವಾಗಿದೆ. ಈ ಟ್ರೇಲರ್ ಅನ್ನು ಬಾಲಿವುಡ್ ಖ್ಯಾತ ನಟ ಹೃತಿಕ್ ರೋಶನ್ ಕೂಡ ಪ್ರಶಂಸಿಸಿದ್ದಾರೆ.
"ಈ ನಟರು ನಟನೆಯನ್ನು ಮುಂದಿನ ಸ್ಥರಕ್ಕೆ ಕೊಂಡೊಯ್ದಿದ್ದಾರೆ. ನೈಜ ಆಲಿಯಾ ಭಟ, ಕಚ್ಛಾ ಶಾಹಿಕ್ ಕಪೂರ್, ಕರೀನಾ ಕಪೂರ್ ಎಲ್ಲರೂ ಅತ್ಯುತ್ತಮವಾಗಿ ನಟಿಸಿದ್ದಾರೆ. ಉಡ್ತಾ ಪಂಜಾಬ್ ಶುಭಾಶಯಗಳು" ಎಂದು ಹೃತಿಕ್ ರೋಶನ್ ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
"ಸಹೋದರ ಧನ್ಯವಾದಗಳು. ಪ್ರೀತಿಯಿಂದ" ಎಂದು ಇದಕ್ಕೆ ಶಾಹಿದ್ ಮರು ಟ್ವೀಟ್ ಮಾಡಿದ್ದಾರೆ.
ದಿಲ್ಜಿತ್ ದೋಸಂಜ್ ಕೂಡ ನಟಿಸಿರುವ 'ಉಡ್ತಾ ಪಂಜಾಬ್' ಸಿನೆಮಾವನ್ನು ಫ್ಯಾಂಟಮ್ ಫಿಲ್ಮ್ಸ್ ಮತ್ತು ಬಾಲಾಜಿ ಮೋಶನ್ ಪಿಕ್ಚರ್ಸ್ ಒಟ್ಟಾಗಿ ನಿರ್ಮಿಸಿದ್ದು, ಪಂಜಾಬಿನ ಡ್ರಗ್ ಮಾಫಿಯಾದ ಬಗೆಗಿನ ಕಥೆ ಹೊಂದಿದೆ.
ಜೂನ್ ೧೭ ಕ್ಕೆ ಬಿಡುಗಡೆಯಾಗಲಿರುವ ಈ ಸಿನೆಮಾದ ಟ್ರೇಲರ್ ಇಲ್ಲಿ ನೋಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


