ಜಂಗಲ್‌ಬುಕ್ ಸಿನಿಮಾ 'ಭಯಾನಕ'!: ಸೆನ್ಸಾರ್ ಮಂಡಳಿ ಮುಖ್ಯಸ್ಥ ಪಹ್ಲಾಜ್ ನಿಹ್ಲಾನಿ
ಪ್ರಸ್ತುತ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಈ ಬಗ್ಗೆ ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಸೆನ್ಸಾರ್...

Published On :
ನವದೆಹಲಿ: ರುಡ್‌ಯಾರ್ಡ್ ಕಿಪ್ಲಿಂಗ್ ಅವರ ಕಾದಂಬರಿ ಜಂಗಲ್‌ಬುಕ್ ದೆಹಲಿ ದೂರದರ್ಶನದಲ್ಲಿ ಧಾರವಾಹಿಯಾಗಿ ಮೂಡಿ ಬಂದು ಜನಮನಗೆದ್ದಿತ್ತು. 90ರ ದಶಕದಲ್ಲಿ ಮಕ್ಕಳ ಇಷ್ಟ ಧಾರವಾಹಿಯಾಗಿದ್ದ ಜಂಗಲ್‌ಬುಕ್ ಇದೀಗ ಚಲನಚಿತ್ರವಾಗಿ ಏಪ್ರಿಲ್ 8ನೇ ತಾರೀಖಿಗೆ ತೆರೆಗೆ ಬರಲಿದೆ.
ಪ್ರಸ್ತುತ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಈ ಬಗ್ಗೆ ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಸೆನ್ಸಾರ್ ಮಂಡಳಿ ಮುಖ್ಯಸ್ಥ, ಈ ಸಿನಿಮಾದಲ್ಲಿ ಬಳಸಿರುವ 3ಡಿ ಇಫೆಕ್ಟ್ ಭಯಾನಕವಾಗಿದೆ. ಅಂದರೆ ಹೆತ್ತವರ ಜತೆಯಲ್ಲಿ ಕುಳಿತೇ ಮಕ್ಕಳು ಸಿನಿಮಾ ನೋಡಬೇಕಿದೆ ಎಂದಿದ್ದಾರೆ.
ಕಾದಂಬರಿಯನ್ನು ಓದಿ ಖುಷಿಯಾಗಿದೆ ಎಂದು ಸಿನಿಮಾ ನೋಡಲು ಹೋಗಬೇಡಿ. ಅಲ್ಲಿ ಮಕ್ಕಳಿಗೆ ನೋಡಲು ಸಾಧ್ಯವಾಗುವಂತ ದೃಶ್ಯಾವಳಿ ಇದೆ ಎಂದು ನಿಮಗೆ ಮನವರಿಕೆಯಾದರೆ ಮಾತ್ರ ಅವರನ್ನು ಕರೆದುಕೊಂಡು ಹೋಗಿ. 3ಡಿ ಆಗಿರುವುದರಿಂದ ಅಲ್ಲಿರುವ ಪ್ರಾಣಿಗಳೆಲ್ಲಾ ಪ್ರೇಕ್ಷಕರ ಮುಂದೆಯೇ ಬಂದಂತೆ ಭಾಸವಾಗುತ್ತದೆ. ಇದು ಮಕ್ಕಳಲ್ಲಿ ಭಯ ಹುಟ್ಟಿಸುತ್ತದೆ ಎಂದು ನಿಹ್ಲಾನಿ ಹೇಳಿದ್ದಾರೆ.
ನಿಹ್ಲಾನಿ ಈ ರೀತಿ ಹೇಳಿಕೆ ನೀಡಿರುವುದಕ್ಕೆ ಚಿತ್ರರಂಗದವರೇ ಅಸಮಧಾನ ವ್ಯಕ್ತಪಡಿಸಿದ್ದು, ಸೆನ್ಸಾರ್ ಮಂಡಳಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೆಂಬ ಕೂಗು ಕೂಡಾ ಕೇಳಿ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸೆನ್ಸಾರ್ ಮಂಡಳಿPahlaj NihalaniJungle BookRudyard KiplingCensor Board Of Film Certificationಜಂಗಲ್ಬುಕ್ರುಡ್ಯಾರ್ಡ್ ಕಿಪ್ಲಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


