ಬಾಲಿಕಾ ವಧು ಸಿದ್ದಾರ್ಥ ಖತ್ರೋಂ ಕೆ ಖಿಲಾಡಿ 7ರ ವಿಜೇತ
ಖತ್ರೋಂ ಕೆ ಖಿಲಾಡಿ, ಕಭೀ ಪೀಡಾ ಕಭೀ ಕೀಡಾ 7ನೇ ಆವೃತ್ತಿಯಲ್ಲಿ ಬಾಲಿಕಾ ವಧು ನಟ ಸಿದ್ದಾರ್ಥ ಶುಕ್ಲ ವಿಜೇತರಾಗಿದ್ದಾರೆ...

ಮುಂಬೈ: ಖತ್ರೋಂ ಕೆ ಖಿಲಾಡಿ, ಕಭೀ ಪೀಡಾ ಕಭೀ ಕೀಡಾ 7ನೇ ಆವೃತ್ತಿಯಲ್ಲಿ ಬಾಲಿಕಾ ವಧು ನಟ ಸಿದ್ದಾರ್ಥ ಶುಕ್ಲ ವಿಜೇತರಾಗಿದ್ದಾರೆ.
ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ನಡೆಸಿದ ಸೆಲೆಬ್ರಿಟಿ ಸ್ಟಂಟ್ ಅಧಾರಿತ ರಿಯಾಲಿಟಿ ಶೋ ಮೈನವಿರೇಳಿಸುವ ಪ್ರದರ್ಶನದಲ್ಲಿ ಅಂತಿಮ ಹಂತದಲ್ಲಿದ್ದ ಸನಾ ಸಯೀದ್ ಮತ್ತು ಮುಕ್ತಿ ಮೋಹನ್ ಅವರನ್ನು ಸೋಲಿಸುವ ಮೂಲಕ ಸಿದ್ಧಾರ್ಥ ವಿಜಯಿಯಾಗಿದ್ದು, 25 ಲಕ್ಷ ರುಪಾಯಿ ನಗದು ಮತ್ತು ಹೊಸ ಟಾಟಾ ಟಿಯಾಗೊ ಕಾರನ್ನು ಬಾಚಿಕೊಂಡಿದ್ದಾರೆ.
ಅರ್ಜೆಂಟೀನಾದಲ್ಲಿ 8 ವಾರಗಳು ನಡೆದ ಸ್ಟಂಟ್ ಸವಾಲುಗಳಲ್ಲಿ 35ರ ಹರೆಯದ ಶುಕ್ಲ ಗಾಯವಾದರೂ ಬಿಡದೆ ಅಪೂರ್ವ ಮಾನಸಿಕ ಹಾಗೂ ದೈಹಿಕ ದೃಢತೆ ಪ್ರದರ್ಶಿಸಿ ಮೊದಲ ಸ್ಥಾನ ಕಾಯ್ದುಕೊಂಡಿದ್ದರು.
ಅಮೆರಿಕದ ಫಿಯರ್ ಫ್ಯಾಕ್ಟರ್ ರಿಯಾಲಿಟಿ ಶೋದ ರೂಪಾಂತರವಾಗಿದ್ದ ಖತ್ರೋಂ ಕೆ ಖಿಲಾಡಿ ಶೋದಲ್ಲಿ ಅಂತಿಮ ಪ್ರದರ್ಶನದಲ್ಲಂತೂ ಸಿದ್ದಾರ್ಥ ಶುಕ್ಲ ನೀರು, ಗಾಳಿ ಮತ್ತು ಬೆಂಕಿಯ ಮಧ್ಯೆ ವಿವಿಧ ಸ್ಟಂಟ್ಗಳನ್ನು ಪ್ರದರ್ಶಿಸಿ ನೋಡುಗರಿಗೆ ಮೈ ರೋಮಾಂಚನವಾಗುವಂತೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


