ಮಾಜಿ ಪ್ರಿಯಕರ ರಣಬೀರ್ ನನ್ನು 'ಬ್ರೋ' ಎಂದು ಕರೆದ ದೀಪಿಕಾ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತನ್ನ ಮಾಜಿ ಪ್ರಿಯಕರ ರಣಬೀರ್ ಕಪೂರ್ ನನ್ನು 'ಬ್ರೋ'...

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತನ್ನ ಮಾಜಿ ಪ್ರಿಯಕರ ರಣಬೀರ್ ಕಪೂರ್ ನನ್ನು 'ಬ್ರೋ' ಎಂದು ಸಂಭೋಧಿಸಿದ್ದಾರೆ.
ಹೌದು! ತಮಾಷಾ ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ಮಾತಿನ ನಡುವೆ ದೀಪಿಕಾ ತನ್ನ ಮಾಜೀ ಪ್ರಿಯಕರ ರಣಬೀರ್ ನನ್ನು “ಬ್ರೋ..” ಎಂದು ಕರಿದಿದ್ದಾರೆ.
ಮಂಗಳವಾರ ಮುಂಬೈಯಲ್ಲಿ ತನ್ನ ಹೊಚ್ಚಹೊಸ ಚಿತ್ರ “ತಮಾಷಾ” ದ ಟ್ರೈಲರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ 90 ದಿನಗಳವರೆಗೆ ಸಂದೇಶಗಳನ್ನು ಡಿಲೀಟ್ ಮಾಡಲಾಗದ್ದರ ಕುರಿತು ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ರಣಬೀರ್, ನಿಮಗೆ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಗಳಿದ್ದರೆ ಖಾಸಗಿ ಸಂದೇಶಗಳನ್ನು ವಾಟ್ಸಪ್ ನಲ್ಲಿ ಕಳುಹಿಸಬೇಡಿ ಎಂದು ಉತ್ತರಿಸಿದ್ದರು.
ರಣಬೀರ್ ಉತ್ತರದಿಂದ ಖುಷಿಯಾದ ದೀಪಿಕಾ ಪಡುಕೋಣೆ ಭುಜದ ಮೇಲೆ ಕೈ ಇಟ್ಟು “ವ್ಹಾಟ್ ಆನ್ ಆನ್ಸರ್ ಬ್ರೋ..” ಅಂತ ಉದ್ಘರಿಸಿ, ತುಟಿ ಕಚ್ಚಿಕೊಂಡರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


