ಆನ್ ಲೈನ್ ಶಾಪಿಂಗ್ ಪ್ರಚಾರ ತಂದ ಕುತ್ತು: ರಣಬೀರ್ ಕಪೂರ್ ವಿರುದ್ಧ ಎಫ್ ಐ ಆರ್
ಆನ್ ಲೈನ್ ಶಾಪಿಂಗ್ ಪರ ಪ್ರಚಾರ ಮಾಡಿದ ನಟ ರಣಬೀರ್ ಹಾಗೂ ನಿರ್ದೇಶಕ ಫರ್ಹಾನ್ ಅಖ್ತರ್ ಸಂಕಷ್ಟಕ್ಕೆ ಸಿಲುಕಿದ್ದಾರೆ

ಆನ್ ಲೈನ್ ಶಾಪಿಂಗ್ ಪರ ಪ್ರಚಾರ ಮಾಡಿದ ನಟ ರಣಬೀರ್ ಹಾಗೂ ನಿರ್ದೇಶಕ ಫರ್ಹಾನ್ ಅಖ್ತರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಬ್ಬರ ಮಾತು ಕೇಳಿ ನಾನು ಮೋಸ ಹೊದೆ ಎಂದು ಗ್ರಾಹಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಹಕರನ್ನು ವಂಚಿಸಿದ ಆರೋಪದ ಮೇಲೆ ಆನ್‌ಲೈನ್ ಶಾಪಿಂಗ್ ಸೈಟ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ಹಾಗೂ ನಿರ್ದೇಶಕ ಫರ್ಹಾನ್ ಅಖ್ತರ್, ರಣಬೀರ್ ಕಪೂರ್ ವಿರುದ್ಧ ಕೇಶವ್ ನಗರದ ಮಡಿಯಾನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
‘ಆಸ್ಕ್ ಮಿ ಬಜಾರ್ ಡಾಟ್ ಕಾಮ್ ಆನ್ ಲೈನ್ ಶಾಪಿಂಗ್ ಜಾಲತಾಣಕ್ಕೆ ಈ ಇಬ್ಬರು ನಟರು ಪ್ರಚಾರದ ರಾಯಭಾರಿಗಳಾಗಿದ್ದರು. ಆದರೆ, ಸಂಸ್ಥೆ ಮೂಲಕ ಉತ್ಪನ್ನಗಳನ್ನು ಖರೀದಿಸಲು ಯತ್ನಿಸಿದ ವಕೀಲ ರಜತ್ ಬನ್ಸಾಲ್ ಅವರು ಮೋಸಕ್ಕೊಳಗಾಗಿದ್ದಾರೆ. ಗ್ರಾಹಕರಿಗೆ ವಂಚಿಸಿದ್ದರಿಂದ ವೆಬ್ ಸೈಟ್ ಹಾಗೂ ಇಬ್ಬರು ಸೆಲೆಬ್ರಿಟಿಗಳ ಮೇಲೆ ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆನ್‌ಲೈನ್ ಶಾಪಿಂಗ್ ಜಾಲತಾಣವಾದ ‘ಆಸ್ಕ್ ಮಿ ಬಜಾರ್ ಡಾಟ್ ಕಾಮ್ನಲ್ಲಿ ಬನ್ಸಾಲ್ ಅವರು 40 ಇಂಚಿನ ಎಲ್ ಇಡಿ ಟಿ.ವಿ.ಯೊಂದನ್ನು ಆಗಸ್ಟ್ 23ರಂದು ಆರ್ಡರ್ ಮಾಡಿದ್ದರು. ಇದಕ್ಕಾಗಿ 29,999 ರೂ.ಗಳನ್ನು ಡೆಬಿಟ್ ಕಾರ್ಡ್ ಬಳಸಿ ಪಾವತಿಸಿದ್ದರು. ಆದರೆ 10 ದಿನ ಕಳೆದರು ಟಿ.ವಿ. ಬರಲಿಲ್ಲ. ಈ ಬಗ್ಗೆ ಸಂಸ್ಥೆಯನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ಸಿಗಲಿಲ್ಲ. ಹೀಗಾಗಿ ಸಂಸ್ಥೆ ವಿರುದ್ಧ ಹಾಗೂ ಸಂಸ್ಥೆಯ ಉತ್ಪನ್ನಗಳಿಗೆ ಜಾಹೀರಾತು ನೀಡಿದ್ದ ಫರ್ಹಾನ್ ಮತ್ತು ರಣಬೀರ್ ವಿರುದ್ಧ ದೂರು ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


