'ಬಾಜಿರಾವ್ ಮಸ್ತಾನಿ'ಯ 'ಗಜಾನನ' ಹಾಡು ಅರ್ಪಣೆ ಮಾಡಲಿರುವ ದೀಪಿಕಾ, ರಣವೀರ್
ಗುರುವಾರ ಆಚರಿಸಲಾಗುವ ಗಣೇಶ ಚತುರ್ಥಿಗೂ ಮುನ್ನ ಬಾಲಿವುಡ್ ನಟರಾದ ರಣವೀರ್ ಸಿಂಗ್ ಮತ್ತಿ ದೀಪಿಕಾ ಪಡುಕೋಣೆ ತಮ್ಮ ಮುಂಬರಲಿರುವ ಚಿತ್ರ 'ಬಾಜಿರಾವ್ ಮಸ್ತಾನಿ'ಯ

ಮುಂಬೈ: ಗುರುವಾರ ಆಚರಿಸಲಾಗುವ ಗಣೇಶ ಚತುರ್ಥಿಗೂ ಮುನ್ನ ಬಾಲಿವುಡ್ ನಟರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮುಂಬರಲಿರುವ ಚಿತ್ರ 'ಬಾಜಿರಾವ್ ಮಸ್ತಾನಿ'ಯ ಗಣಪತಿಗೆ ಅರ್ಪಿಸಲಾಗಿರುವ 'ಗಜಾನನ' ಹಾಡನ್ನು ಬಿಡುಗಡೆ ಮಾಡಲಿದ್ದಾರೆ.
"ಶಕ್ತಿಯುತ 'ಗಜಾನನ' ಆರತಿ ಯನ್ನು ನಾಳೆ ಬಿಡುಗಡೆ ಮಾಡಲಿದ್ದೇವೆ! #ಬಾಜಿರಾವ್ ಮಸ್ತಾನಿ" ಎಂದು ರಣವೀರ್ ಸಿಂಗ್ ಸೋಮವಾರ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಗಣಪತಿಯ ವಿಗ್ರಹದ ಜೊತೆ ಫೋಟೋ ಹಾಕಿಕೊಂಡಿರುವ ಅವರು, "ಗಿನ್ನಿಸ್ ದಾಖಲೆ ಸಂಖ್ಯೆಯ ಜನರು ಗಣಪತಿಯ ಚಿತ್ರವನ್ನು ಮಾನವ ಸರಪಳಿ ಮೂಲಕ ಮಾಡಿರುವುದನ್ನು ಕಣ್ಣಾರೆ ನೋಡಿ" ಎಂದು ಕೂಡ ಬರೆದುಕೊಂಡಿದ್ದಾರೆ.
ಈ ಬಿಡುಗಡೆಯಲ್ಲಿ ರಣವೀರ್ ಮತ್ತು ದೀಪಿಕಾ 'ಮಹಾ ಆರತಿ' ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮ ಮಂಗಳವಾರ ಪುಣೆಯ, ಬಾಲೇವಾಡಿಯ ಛತ್ರಪತಿ ಶಿವಾಜಿ ಕ್ರೀಡಾ ಸಭಾಂಗಣದಲ್ಲಿ ನಡೆಯಲಿದೆ.
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಈ ಐತಿಹಾಕಿಕ ಕಥಾಹಂದರವುಳ್ಳ ಸಿನೆಮಾದಲ್ಲಿ ರಣವೀರ್ ಸಿಂಗ್ ೧೮ ನೆ ಶತಮಾನದ ಮಾರಾಠಾ ರಾಜ ಪೇಶ್ವಾ ಬಾಜಿರಾವ್ ೧ ರ ಪಾತ್ರ ಹಾಕಿದ್ದರೆ ಅವನ ಪ್ರೇಯಸಿ ಮಸ್ತಾನಿ ಪಾತ್ರವನ್ನು ದೀಪಿಕಾ ನಿರ್ವಹಿಸಿದ್ದಾರೆ. ಅವನ ಮೊದಲ ಪತ್ನಿ ಕಾಶೀಭಾಯಿ ಪಾತ್ರವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಪ್ರಿಯಾಂಕ ಛೋಪ್ರಾ ನಿರ್ವಹಿಸಿದ್ದಾರೆ.
ಸಿನೆಮಾ ಡಿಸೆಂಬರ್ ೧೮ ರಂದು ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


