ಬಾಲಿವುಡ್

ನಟನೆಯತ್ತ ಮೀರಾ ರಜಪೂತ್

ಮೀರಾ ರಜಪೂತ್ ಅನ್ನುವ ಹೆಸರನ್ನು ಎಲ್ಲಿಯೋ ಕೇಳಿದಂತಿದೆ ಅಂದರೆ, ಇನ್ನು ಆಗಾಗ ಕೇಳಬಹುದು. ಈಕೆ ಶಾಹಿದ್ ಕಪೂರನ ಹೆಂಡತಿ, ನವವಧು....

ನಟನೆಯತ್ತ ಮೀರಾ ರಜಪೂತ್
ಮೀರಾ ರಜಪೂತ್
Published On :

ಮೀರಾ ರಜಪೂತ್ ಅನ್ನುವ ಹೆಸರನ್ನು ಎಲ್ಲಿಯೋ ಕೇಳಿದಂತಿದೆ ಅಂದರೆ, ಇನ್ನು ಆಗಾಗ ಕೇಳಬಹುದು. ಈಕೆ ಶಹೀದ್ ಕಪೂರನ ಹೆಂಡತಿ, ನವವಧು. ಮೊನ್ನೆಯಷ್ಟೇ ಮದುವೆ ಸುದ್ದಿಯಲ್ಲಿ ಓದಿರುತ್ತೀರಿ. ಈಗ ಮತ್ತೆ ಈಕೆಯ ಹೆಸರು ಕೇಳಿಬರಲು ಕಾರಣ, ಈಕೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾಳಂತೆ.

ತನ್ನ ಪತ್ನಿಯನ್ನು ಬಾಲಿವುಡ್‍ನ ಗ್ಲಾಮರಸ್ ಅವತಾರದಲ್ಲಿ ನೋಡಲು ಶಾಹಿದ್ ಉತ್ಸುಕನಾಗಿದ್ದಾನೆ. ಆದರೆ ಆಕೆ ಚಿತ್ರದ ಹೀರೋಯಿನ್ ಅಲ್ಲ. ವಿಕ್ರಮಾದಿತ್ಯ ಮೋಟ್ವಾನಿ ಈ ಚಿತ್ರದ ನಿರ್ಮಾಪಕ. ಚಿತ್ರದ ಹೆಸರು `ಎಕೆ ವರ್ಸಸ್ ಎಸ್‍ಕೆ'. ಇದರಲ್ಲೊಂದು ಸಣ್ಣ ರೋಲು ಈಕೆಯದ್ದು. ಅಂದಹಾಗೆ ಚಿತ್ರದ ಹೀರೋ ಬೇರೆ ಯಾರೂ ಅಲ್ಲ, ಈಕೆಯ ಪತಿ ಮಹಾಶಯನೇ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.