ಬಾಲಿವುಡ್

ಸನ್ನಿ ಲಿಯೊನ್ ಇಂದಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ: ರಾಖಿ ಸಾವಂತ್

ನೀಲಿ ತಾರೆ ನಟಿ ಸನ್ನಿ ಲಿಯೊನ್ ರ ಕಾಂಡೋಮ್ ಜಾಹಿರಾತು ಮತ್ತು ಅವರು ಅಭಿನಯಿಸಿರುವ ಸೆಕ್ಸಿ ಹಾಡುಗಳು ಪುರುಷರನ್ನು ಉದ್ರೇಕಿಸುತ್ತದೆ ಹೀಗಾಗಿ ಅತ್ಯಾಚಾರ...

ಸನ್ನಿ ಲಿಯೊನ್ ಇಂದಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ: ರಾಖಿ ಸಾವಂತ್
ರಾಖಿ ಸಾವಂತ್
Published On :

ಮುಂಬೈ: ನೀಲಿ ತಾರೆ ನಟಿ ಸನ್ನಿ ಲಿಯೊನ್ ರ ಕಾಂಡೋಮ್ ಜಾಹಿರಾತು ಮತ್ತು ಅವರು ಅಭಿನಯಿಸಿರುವ ಸೆಕ್ಸಿ ಹಾಡುಗಳು ಪುರುಷರನ್ನು ಉದ್ರೇಕಿಸುತ್ತದೆ ಹೀಗಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಐಟಂ ಗರ್ಲ್ ರಾಖಿ ಸಾವಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸನ್ನಿ ಲಿಯೊನ್ರಿಂದಾಗಿಯೇ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಿಪಿಐ ನಾಯಕ ಅತುಲ್ ಕುಮಾರ್ ಹೇಳಿ ವಿವಾದಕ್ಕೆ ಕಾರಣವಾಗಿದ್ದರು. ಇದೀಗ ಸನ್ನಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ರಾಖಿ ಸಾವಂತ್ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಸದಾ ವಿವಾದಾತ್ಮಕ, ಅಸಂಬದ್ಧ ಹೇಳಿಕೆಗಳನ್ನು ನೀಡುವುದರ ಮೂಲಕ ಸುದ್ದಿಯಾಗುವ ರಾಖಿ, ಸನ್ನಿಗೆ ಅಪಮಾನ ಮಾಡಲು ಸಿಕ್ಕುವ ಯಾವುದೇ ಅವಕಾಶಗಳನ್ನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಈ ಬಾರಿ ಸಹ ಅವರ ಸನ್ನಿ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ.

ಇತ್ತೀಚೆಗೆ ಮುಂಬೈಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನಟಿ ರಾಖಿ, ಒಂದು ವೇಳೆ ಸನ್ನಿ ಲಿಯೋನ್‌ಗೆ ಭಾರತೀಯ ಚಿತ್ರರಂಗದಲ್ಲಿ ನಟಿಸಬೇಕು ಎನ್ನುವ ಇಚ್ಚೆಯಿದ್ದರೆ ಮೈ ತುಂಬಾ ಬಟ್ಟೆ ತೊಡುವುದನ್ನು ಕಲಿಯಲಿ. ಇಲ್ಲದಿದ್ದರೆ ಈ ಕೂಡಲೇ ಸನ್ನಿಯನ್ನು ದೇಶದಿಂದ ಗಡೀಪಾರು ಮಾಡಬೇಕು ಎಂದು ಗುಡುಗಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.