ರಾಧಿಕೆ ನಿನ್ನ ಸರಸವಿದೇ
ರಾಧಿಕಾ ಆಪ್ಟೆ ನಟಿಸುವ ಚಿತ್ರಗಳು ಆಕೆಯ ಅಭಿನಯ ಪ್ರತಿಭೆಯಿಂದ ಸುದ್ದಿ ಮಾಡುತ್ತಿವೆ. ಅದರ ಜತೆಗೇ, ಆಪ್ಟೆಗೆ ಅನಿವಾರ್ಯವಲ್ಲದ ಅನವಶ್ಯಕ ವಿವಾದಗಳಿಂದಲೂ ಸುದ್ದಿಯಾಗುತ್ತಿವೆ. ರಾಧಿಕಾ ಆಪ್ಟೆ ಆಗಾಗ ಬಿ ಟೌನ್‍ನಲ್ಲಿ...

ರಾಧಿಕಾ ಆಪ್ಟೆ ನಟಿಸುವ ಚಿತ್ರಗಳು ಆಕೆಯ ಅಭಿನಯ ಪ್ರತಿಭೆಯಿಂದ ಸುದ್ದಿ ಮಾಡುತ್ತಿವೆ. ಅದರ ಜತೆಗೇ, ಆಪ್ಟೆಗೆ ಅನಿವಾರ್ಯವಲ್ಲದ ಅನವಶ್ಯಕ ವಿವಾದಗಳಿಂದಲೂ ಸುದ್ದಿಯಾಗುತ್ತಿವೆ. ರಾಧಿಕಾ ಆಪ್ಟೆ ಆಗಾಗ ಬಿ ಟೌನ್‍ನಲ್ಲಿ ಕೇಳಿಬರುತ್ತಿರುವ ಹೆಸರು. ಈಕೆಯ ಹೆಸರು ಪ್ರಸ್ತಾಪವಾದ ಕೂಡಲೇ ಚಿತ್ರರಸಿಕರು ಕುತೂಹಲದಿಂದ ಕಣ್ಣರಳಿಸುತ್ತಾರೆ.
ಆಪ್ಟೆಯ ಅಭಿನಯ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಆಕೆ ಮೇನ್‍ಸ್ಟ್ರೀಮ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೂ ಇದ್ದಾಳೆ. ಆದರೆ ರಸಿಕರು ಪುಳಕಗೊಳ್ಳಲು ಕಾರಣ ಅದಲ್ಲ. ಆಕೆ ಕಾಣಿಸಿಕೊಳ್ಳುವ ಚಿತ್ರದ ಬೆಚ್ಚಿಬೀಳಿಸುವ ಸೀನುಗಳು ಅಥವಾ ಚಿತ್ರಕ್ಕೆ ಸಂಬಂಧಿಸಿದ ಯಾವುದೋ ಗುಪ್ತ್ ಗುಪ್ತ್ ವಿಷಯ ಮೊದಲೇ ಲೀಕ್ ಆಗಿಬಿಡುತ್ತದೆ ಎನ್ನುವುದು ಮುಖ್ಯ ಕಾರಣ.
ಇದುವರೆಗೆ ಆಕೆ ನಟಿಸಿದ ಬಹುತೇಕ ಚಿತ್ರಗಳ ವಿಚಾರದಲ್ಲಿ ಇದು ನಿಜವಾಗಿದೆ. ಬೇಕಿದ್ದರೆ ನೋಡಿ. ಇತ್ತೀಚೆಗೆ ಬಿಡುಗಡೆಯಾದ, ನವಾಜುದ್ದೀನ್ ಸಿದ್ದಿಕಿ ಜತೆ ಆಕೆ ಹೀರೋಯಿನ್ ಆಗಿ ನಟಿಸಿರುವ `ಮಾಂಝಿ' ಚಿತ್ರ ಥಿಯೇಟರ್‍ಗಳಲ್ಲಿ ರಿಲೀಸ್ ಆಗುವ ಮುನ್ನವೇ ಆನ್‍ಲೈನ್‍ನಲ್ಲಿ ಲೀಕ್ ಆಗಿಬಿಟ್ಟಿತ್ತು.
ರಿಲೀಸಿಗೆ ಎರಡು ದಿನ ಮುನ್ನವೇ ಇದರ ಪ್ರಿವ್ಯೂ ಕಾಪಿಯನ್ನು ಟೊರೆಂಟ್ ಸೈಟ್‍ಗಳಲ್ಲಿ ಡೌನ್‍ಲೋಡ್ ಮಾಡಿಕೊಂಡವರಿದ್ದರು. ಅದಕ್ಕೆ ಮುನ್ನ ಆಕೆ ನಗ್ನವಾಗಿ ಕಾಣಿಸಿಕೊಳ್ಳುತ್ತಿರುವ
ದೃಶ್ಯವೊಂದು ಯುಟ್ಯೂಬ್‍ನಲ್ಲಿ ಹರಿದಾಡಿತು. ಅದು ಅನುರಾಗ್ ಕಶ್ಯಪ್‍ನ ಮುಂಬರಲಿರುವ ಶಾರ್ಟ್ ಪಿsಲಂನದೆಂದು ಹೇಳಲಾಯಿತು. ಅಲ್ಲಿ ಕಶ್ಯಪ್ ಕೂಡ ಸ್ವಲ್ಪ ಮಟ್ಟಿಗೆ ಕಾಣಿಸುತ್ತಾನೆ. ಆದರೆ ಚಿತ್ರದ ಕ್ವಾಲಿಟಿ ಒಳ್ಳೆಯ ಕ್ಯಾಮೆರದಲ್ಲಿ ತೆಗೆದಂತಿಲ್ಲ.
ಮೊಬೈಲ್‍ನಲ್ಲಿ ಚಿತ್ರಿಸಿದಂತಿದೆ. ಆದ್ದರಿಂದ ಇದು ಚಿತ್ರೀಕರಣ ತಂಡದಲ್ಲಿದ್ದ ಯಾರದೋ ಕೃತ್ಯವಿರಬೇಕು ಎಂಬ ಊಹೆ. ಅನುರಾಗ್ ಕಶ್ಯಪ್ಇದರಿಂದ ರಾಂಗ್ ಆಗಿ ಕೋರ್ಟ್‍ಗೆ ಹೋಗುವ ಮಾತಾಡಿದ್ದಾನೆ. ಏನೇ ಇದ್ದರೂ, ಈ ಕಾಂಟ್ರವರ್ಸಿ ಆಕೆಯ ಅವರಿಬ್ಬರ ಮುಂದಿನ ಚಿತ್ರದ ಪ್ರಚಾರಕ್ಕೆ ನೆರವಾಗುವುದರಲ್ಲಿ ಸಂದೇಹವಿಲ್ಲ.
ಇದಕ್ಕೆ ಮುನ್ನ ಆಕೆಯ `ಬದ್ಲಾಪುರ್' ಚಿತ್ರ ಬರುವ ಹೊತ್ತಿಗೆ ಸರಿಯಾಗಿ, ಆಕೆಯ ಮೇಲ್ಮೈಯ ಹಲವು ಚಿತ್ರಗಳು ಆನ್‍ಲೈನ್‍ನಲ್ಲಿ ಹರಿದಾಡಿದವು. ಇದನ್ನು ರಾಧಿಕಾ ಸಮರ್ಥಿಸಿಕೊಂಡಳು. `ಏನೀಗ? ನೀವು ಪ್ರೇಮಿಸುವ ಹುಡುಗಿಯೂ ಬಟ್ಟೆ ತೆಗೆದರೆ ಹೀಗೇ ಕಾಣುತ್ತಾಳೆ' ಎಂದು ಟ್ವೀಟ್ ಮಾಡುವ ಮೂಲಕ ಅದನ್ನು ಫಾರ್ವರ್ಡ್ ಮಾಡುತ್ತಿದ್ದ ಪಡ್ಡೆಗಳಿಗೆ ಟಾಂಗ್ ಕೊಟ್ಟಳು.
ಟ್ವಿಸ್ಟ್ ಏನು ಅಂದರೆ, ಈ ಚಿತ್ರಗಳು ಲೀಕ್ ಆಗುವ ಮುನ್ನವೇ ಆಕೆಯ ಟ್ವೀಟ್ ಪೋಸ್ಟ್ ಆಗಿತ್ತು! ಅಂದರೆ ಇದು ಆಕೆಯದೇ ಪಬ್ಲಿಸಿಟಿ ಸ್ಟಂಟ್ ಆಗಿತ್ತಾ? ಸ್ವತಃ ರಾಧಿಕಾಳಿಗೆ ಇಂಥ ವಿವಾದಗಳಿಂದ ಅಂತಹ ತಲೆನೋವು ಏನೂ ಆಗಿಲ್ಲ. `ಈ ಜಗತ್ತಿನಲ್ಲಿ ಕೆಲಸವಿಲ್ಲದ ಸಾವಿರಾರು ಮಂದಿ ಇದ್ದಾರೆ. ಅವರಿಗೆಲ್ಲ ಇದೇ ಕೆಲಸ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳೋದಕ್ಕಾಗಲ್ಲ' ಎಂಬುದು ಈ ಕುರಿತು ಆಕೆಯ ಪ್ರತಿಕ್ರಿಯೆ.
ಆಕೆಯ ಫ್ಯಾಮಿಲಿಯೂ ಇದರ ಬಗ್ಗೆ ಟೆನ್ಷನ್ ಆಗಲ್ಲವಂತೆ. ನಗ್ನತೆ ಮತ್ತು ಭಾರತೀಯ ಹಿನ್ನೆಲೆಯಲ್ಲಿ ಅದು ಬೆಳೆದುಬಂದ ಬಗೆಯನ್ನು ಪ್ರೌಢವಾಗಿ ಚಿಂತಿಸಬಲ್ಲ ಹಾಗೂ ಬರೆಯಬಲ್ಲ ಕಲೆಯೂ ಇರುವ ರಾಧಿಕಾ ಆ ಬಗ್ಗೆ ಪ್ರಜ್ಞಾಪೂರ್ವಕವಾಗಿ ಆರಾಮಾಗಿರಬಲ್ಲಳು. ಆದರೆ ಲೀಕುಗಳದೇ ಸಮಸ್ಯೆ; ಅವು ನೈಜ ಲೀಕುಗಳೋ ಅಥವಾ ಉದ್ದೇಶಪೂರ್ವಕವೋ ಅನ್ನುವುದು ಅರಿವಾಗುವರೆಗೂ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


