ಬಾಲಿವುಡ್

ಸಂಜಯ್ ದತ್ ಬಯೋಪಿಕ್ ಭಾವನಾತ್ಮಕ ಮತ್ತು ಹಾಸ್ಯಮಯವಾಗಿರುತ್ತದೆ: ಹಿರಾನಿ

ಗೆಳೆಯ ಸಂಜಯ್ ದತ್ ಅವರ ಬಯೋಪಿಕ್ ನಿರ್ದೇಶನ ಮಾಡುತ್ತಿರುವ ಬ್ಲಾಕ್ ಬಸ್ಟರ್ ನಿರ್ದೇಶಕ ರಾಜಕುಮಾರ್ ಹಿರಾನಿ ಅವರು ಸಿನೆಮಾ ಭಾವನಾತ್ಮಕ ಮತ್ತು

ಸಂಜಯ್ ದತ್ ಬಯೋಪಿಕ್ ಭಾವನಾತ್ಮಕ ಮತ್ತು ಹಾಸ್ಯಮಯವಾಗಿರುತ್ತದೆ: ಹಿರಾನಿ
ಬ್ಲಾಕ್ ಬಸ್ಟರ್ ನಿರ್ದೇಶಕ ರಾಜಕುಮಾರ್ ಹಿರಾನಿ
Published On :

ಮುಂಬೈ: ಗೆಳೆಯ ಸಂಜಯ್ ದತ್ ಅವರ ಬಯೋಪಿಕ್ ನಿರ್ದೇಶನ ಮಾಡುತ್ತಿರುವ ಬ್ಲಾಕ್ ಬಸ್ಟರ್ ನಿರ್ದೇಶಕ ರಾಜಕುಮಾರ್ ಹಿರಾನಿ ಅವರು ಸಿನೆಮಾ ಭಾವನಾತ್ಮಕ ಮತ್ತು ಹಾಸ್ಯಮಯವಾಗಿರುತ್ತದೆ ಎಂದಿದ್ದಾರೆ.

"ನನ್ನ ಬಹುತೇಕ ಸಿನೆಮಾಗಳಂತೆ ಇದು ಕೂಡ ಭಾವನಾತ್ಮಕ ಮತ್ತು ಹಾಸ್ಯಮಯವಾಗಿರುತ್ತದೆ. ನನಗೆ ಜನರ ಬಗ್ಗೆ ಆಸಕ್ತಿಯಿರುವ ಕಥೆಗಳನ್ನು ಹೇಳಲು ಇಷ್ಟ, ಸಂಜಯ್ ದು ಕೂಡ ಅಂತಹಾದ್ದೆ ಒಂದು ಕಥೆ" ಎಂದು ೧೭ ನೆ ಜಿಯೋ ಮಾಮಿ ಮುಂಬೈ ಸಿನೇಮೋತ್ಸವದ ಸಮಯದಲ್ಲಿ ತಿಳಿಸಿದ್ದಾರೆ.

ಶನಿವಾರ ಆಯೋಜಿಸಲಾಗಿದ್ದ 'ಮೂವಿ ಮೇಳಾ'ದಲ್ಲಿ ಮಾತನಾಡಿದ ಅವರು 'ಬ್ಲಾಕ್ ಬಸ್ಟರ್ ಸಿನೆಮಾಗಳನ್ನು ಮಾಡುವುದರ ಬಗ್ಗೆ ಕಿವಿಮಾತುಗಳನ್ನು ಹೇಳಿದ್ದಾರೆ.

"ಒಬ್ಬ ಮನುಷ್ಯನ ಇಡೀ ಜೀವನವನ್ನು ಮೂರು ಘಂಟೆಗಳ ಅವಧಿಯಲ್ಲಿ ಹೇಳುವುದು ಕಷ್ಟ" ಎಂದಿರುವ ಅವರು ಸ್ಕ್ರಿಪ್ಟ್ ಬರೆಯಲು ೨೫ ದಿನಗಳಿಂದ ಸತತ ಪರಿಶ್ರಮ ಪಡುತ್ತಿರುವುದರ ಬಗ್ಗೆ ತಿಳಿಸಿದ್ದಾರೆ.

ಸಂಜಯ್ ದತ್ ಪಾತ್ರವನ್ನು ರಣಬೀರ್ ಕಪೂರ್ ನಿರ್ವಹಿಸಲಿದ್ದು ಮುಂದಿನ ವರ್ಷ ಚಿತ್ರೀಕರಣ ಪರರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.