ಬಾಲಿವುಡ್

ತಮ್ಮ ಪಿಂಚಣಿ ಹಣವನ್ನು ನಿರ್ಗತಿಕರಿಗೆ ನೀಡಿ: ಬಿಗ್ ಬಿ ಕುಟುಂಬ

ಉತ್ತರ ಪ್ರದೇಶ ಸರ್ಕಾರ ನೀಡುತ್ತಿರುವ 50ಸಾವಿರ ಪಿಂಚಣಿ ಹಣವನ್ನು ಬಡ ಹಾಗೂ ನಿರ್ಗತಿಕರಿಗೆ ನೀಡಲು ಬಿಗ್ ಬಿ ಕುಟುಂಬ ಮನವಿ...

ತಮ್ಮ ಪಿಂಚಣಿ ಹಣವನ್ನು ನಿರ್ಗತಿಕರಿಗೆ ನೀಡಿ: ಬಿಗ್ ಬಿ ಕುಟುಂಬ
ಅಮಿತಾಬ್ ಬಚ್ಚನ್ ಕುಟುಂಬ
Published On :

ಲಕ್ನೋ: ಉತ್ತರ ಪ್ರದೇಶ ಸರ್ಕಾರ ನೀಡುತ್ತಿರುವ 50ಸಾವಿರ ಪಿಂಚಣಿ ಹಣವನ್ನು ಬಡ ಹಾಗೂ ನಿರ್ಗತಿಕರಿಗೆ ನೀಡಲು ಬಿಗ್ ಬಿ ಕುಟುಂಬ ಮನವಿ ಸಮಾಜವಾದಿ ಸರ್ಕಾರಕ್ಕೆ ಮನವಿ ಮಾಡಿದೆ.

ಬಾಲಿವುಡ್‌ ಮೆಗಾಸ್ಟಾರ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌, ಅವರ ಪತ್ನಿ ಜಯಾ ಬಚ್ಚನ್‌ ಮತ್ತು ಪುತ್ರ ಅಭಿಷೇಕ್‌ ಬಚ್ಚನ್‌ ಅವರಿಗೆ ಉತ್ತರ ಪ್ರದೇಶ ಸರ್ಕಾರ ಪ್ರತಿ ತಿಂಗಳು 50 ಸಾವಿರ ರೂ. ಪಿಂಚಣಿ  ನೀಡುತ್ತಿದೆ. ತಮ್ಮ ಕುಟುಂಬಕ್ಕೆ ನೀಡುತ್ತಿರುವ ಪಿಂಚಣಿ ಹಣವನ್ನು ಅವಶ್ಯಕತೆ ಇರುವವರಿಗೆ ನೀಡಬೇಕೆಂದು ಸರ್ಕಾರಕ್ಕೆ ತಿಳಿಸಿದ್ದಾರೆ.

ಅಮಿತಾಬ್ ಬಚ್ಚನ್ ಕುಟುಂಬ "ಯಶ್‌ ಭಾರತೀ ಸಮ್ಮಾನ್‌'  ಪಡೆದಿರುವ ಹಿನ್ನೆಲೆಯಲ್ಲಿ ಅಖೀಲೇಶ್‌ ಯಾದವ್‌ ನೇತೃತ್ವದ ಉತ್ತರ ಪ್ರದೇಶ ಸರಕಾರ ಈ ಸಿರಿವಂತ ಬಾಲಿವುಡ್‌ ತಾರಾ ಕುಟುಂಬಕ್ಕೆ ದೇಶದಲ್ಲೇ ಗರಿಷ್ಠ ಮೊತ್ತದ ಪಿಂಚಣಿಯನ್ನು ನೀಡುತ್ತಿದೆ. ಈ "ಯಶ್‌ ಭಾರತೀ ಸಮ್ಮಾನ್‌' ಪ್ರಶಸ್ತಿಯು ಉತ್ತರ ಪ್ರದೇಶದ ಎಸ್‌ಪಿ ಸರಕಾರ ನೀಡುವ ಗರಿಷ್ಠ ಪಿಂಚಣಿಯ "ಮಹೋನ್ನತ ಪ್ರಶಸ್ತಿ'ಯಾಗಿದೆ.

ಎಸ್‌ಪಿ ಸರಕಾರ ಅಧಿಕಾರದಲ್ಲಿದ್ದಾಗ ಮಾತ್ರ ಈ  ಪಿಂಚಣಿ ಹಣ ನೀಡಲಾಗುತ್ತದೆ. ಉತ್ತರ ಪ್ರದೇಶ ಮೂಲದವರಾಗಿದ್ದವರಿಗೆ ಯಶ್‌ ಭಾರತಿ ಸಮ್ಮಾನ್‌ ಪ್ರಶಸ್ತಿ ನೀಡಲಾಗುತ್ತದೆ. ಅಮಿತಾಬ್‌ ಅವರ ತಂದೆ, ಖ್ಯಾತ ಕವಿ, ಸಾಹಿತಿ ಹರಿವಂಶರಾಯ್‌ ಬಚ್ಚನ್‌ ಅವರಿಗೆ ಈ ಪ್ರಶಸ್ತಿ ಸಂದಿರುವುದು ಕೂಡ ಅದೇ ಕಾರಣಕ್ಕೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದಕ್ಕೆ ಈ ಪ್ರಶಸ್ತಿ ನೀಡಲಾಗುತ್ತದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.