ಬ್ರೆಟ್‍ಲೀ ಸಂಗಾತಿ ಬಂಗಾಳಿ ತಾನ್ನಿಷ್ತಾ
ತಾನ್ನಿಷ್ತಾ ಚಟರ್ಜಿ ಬಂಗಾಳಿ ಕೃಷ್ಣ ಸುಂದರಿ. ಯುರೋಪಿನ ಹಲವು ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿ ಹತ್ತಾರು ಅವಾರ್ಡ್ ಪಡೆದರೂ ಇಲ್ಲಿ ನಮಗಿನ್ನೂ ಅಪರಿಚಿತೆ ಎನ್ನುವ ಮಟ್ಟಿಗೆ ಗುಪ್ತಗಾಮಿನಿ...

ತಾನ್ನಿಷ್ತಾ ಚಟರ್ಜಿ ಬಂಗಾಳಿ ಕೃಷ್ಣ ಸುಂದರಿ. ಯುರೋಪಿನ ಹಲವು ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿ ಹತ್ತಾರು ಅವಾರ್ಡ್ ಪಡೆದರೂ ಇಲ್ಲಿ ನಮಗಿನ್ನೂ ಅಪರಿಚಿತೆ ಎನ್ನುವ ಮಟ್ಟಿಗೆ ಗುಪ್ತಗಾಮಿನಿ. ಈಗ `ಅನ್‍ಇಂಡಿಯನ್' ಸಿನಿಮಾದಲ್ಲಿ ಆಸೀಸ್‍ನ ಮಾಜಿ ಕ್ರಿಕೆಟಿಗ ಬ್ರೆಟ್‍ಲೀ ಜೊತೆ ನಟಿಸಿ, ಗ್ರ್ಯಾಂಡ್ ಆಗಿ ಸುದ್ದಿ ಆಗ್ತಿದ್ದಾಳೆ!
ಅನುಪಮ ಶರ್ಮಾ ನಿರ್ದೇಶನದ `ಅನ್‍ಇಂಡಿಯನ್' ನಾಡಿದ್ದು (ಅ.15) ತೆರೆಕಾಣಲಿದೆ. ಭಾರತದ ಅಂಧ, ಅನಾಥ ಮಕ್ಕಳ ಕಲ್ಯಾಣದ ಕನಸು ಕಾಣುತ್ತಲೇ ಸಿನಿಮಾ ಮೂಲಕವೂ ಇಂಡಿಯಾವನ್ನು ಜಪಿಸುತ್ತಿದ್ದಾರೆ ಬ್ರೆಟ್‍ಲೀ. ತಾನ್ನಿಷ್ತಾ ಇಲ್ಲಿ ಸಿಂಗಲ್ ಮದರ್ ಅಂತೆ. ಇವಳಿಗೊಬ್ಬಳು ಮಗಳು. ಬ್ಯಾಚುಲರ್ ಹುಡುಗ ಬ್ರೆಟ್ ಲೀ ಜೊತೆಗೆ ಈಕೆಗೆ ನಂಟಾಗುತ್ತದೆ. ಬ್ರೆಟ್‍ಲೀ ಪಾತ್ರವೂ ಇಲ್ಲಿ ಮಜವಾಗಿದೆಯಂತೆ. ವಿಲ್ ಎಂಬ ಹೆಸರಿನ ಇಂಗ್ಲಿಷ್ ಟೀಚರ್ ಬ್ರೆಟ್‍ಲೀ. ವಿದೇಶಿ ಹುಡುಗರಿಗೆ `ಆಸೀಸ್ ಇಂಗ್ಲಿಷ್' ಕಲಿಸುತ್ತಾನೆ. ಇವನೊಂದು ಹೇಳಿದ್ರೆ, ಹುಡುಗರು ಇನ್ನೊಂದು ರೀತಿ ಉಚ್ಚರಿಸುವ ದೃಶ್ಯಗಳು ಹಾಸ್ಯಭರಿತವಾಗಿವೆಯಂತೆ. ಬ್ರೆಟ್‍ಲೀ ಬಿಳಿ ಕೋಟ್ ಹಾಕ್ಕೊಂಡು ಬರುತ್ತಿದ್ದಾಗ ಆತನ ಮೇಲೆ ಬಣ್ಣದ ಓಕುಳಿ ಎರಚಿ ಅವನನ್ನು ಕುಣಿಯುವಂತೆ ಹುರಿದುಂಬಿಸುತ್ತಾಳೆ.
ಬ್ರೆಟ್‍ಲೀ ಕ್ರಿಕೆಟ್ ಮೈದಾನದಲ್ಲಿದ್ದಾಗ ಗಾರ್ಡ್ ಹಾಕ್ಕೊಳ್ತಿರ್ತಾನೆ, ಆ ದೃಶ್ಯವನ್ನು ನೋಡಿ ತಾನ್ನಿಷ್ತಾ ಗೊಳ್ಳನೆ ನಗುತ್ತಾಳೆ. ತಾನ್ನಿಷ್ತಾ ಯೋಗ ಮಾಡ್ತಿರೋದನ್ನು ಬ್ರೆಟ್‍ಲೀ ನೋಡಿ ಹುಬ್ಬೇರಿಸುವ ದೃಶ್ಯಗಳು ಟ್ರೈಲರ್‍ನಲ್ಲಿವೆ. ದೆಹಲಿ ಯುನಿವರ್ಸಿಟಿಯಲ್ಲಿ ಕೆಮಿಸ್ಟ್ರಿ ಓದಿರುವ ತಾನ್ನಿಷ್ತಾ ಹುಟ್ಟಿದ್ದು ಮುಂಬೈನಲ್ಲಿ. ಯುರೋಪಿನ ಘಟಾನುಘಟಿ ಕಲಾವಿದರೊಟ್ಟಿಗೆ ನಾಟಕಗಳಲ್ಲಿ ಅಭಿನಯಿಸಿದ್ದಾಳೆ. ಜರ್ಮನ್ ಫಿಲ್ಮ್ ಗಳಲ್ಲೂ ನಟಿಸಿದ್ದಾಳೆ. ಒಟ್ಟಾರೆ ಏಳೆಂದು ಪ್ರಶಸ್ತಿಗಳನ್ನು ಪಡೆದಿರುವ ತಾನ್ನಿಷ್ತಾ, ಬಾಲಿವುಡ್‍ನ `ಗುಲಾಬ್‍ಗ್ಯಾಂಗ್'ನಲ್ಲೂ ಮಾಧುರಿ ದಿಕ್ಷಿತ್ ಜೊತೆ ನಟಿಸಿದ್ದಾಳೆ. ಆದರೂ ನಾವು ತಾನ್ನಿಷ್ತಾ ಯಾರೆಂದು ಕೇಳುವ ಸ್ಥಿತಿಯಲ್ಲಿದ್ದೇವೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


