ಬಾಲಿವುಡ್

ನನ್ನ ಸಂಭಾವನೆ ಬಗ್ಗೆ ತೃಪ್ತಿ ಇದೆ: ಕರೀನಾ ಕಪೂರ್

ಬಾಲಿವುಡ್ ನಟಿಯರಿಗೆ ಉತ್ತಮ ಸಂಭಾವನೆ ನೀಡುವುದಿಲ್ಲ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಕರೀನಾ ಕಪೂರ್...

ನನ್ನ ಸಂಭಾವನೆ ಬಗ್ಗೆ ತೃಪ್ತಿ ಇದೆ: ಕರೀನಾ ಕಪೂರ್
ಕರೀನಾ ಕಪೂರ್
Published On :

ಕರಾಚಿ: ಬಾಲಿವುಡ್ ನಟಿಯರಿಗೆ ಉತ್ತಮ ಸಂಭಾವನೆ ನೀಡುವುದಿಲ್ಲ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಕರೀನಾ ಕಪೂರ್, ತಮ್ಮ ಸಂಭಾವನೆ ಬಗ್ಗೆ ತೃಪ್ತಿ ಮತ್ತು ಸಂತೋಷವಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಇಂಡಿಯನ್ ಎಕ್ಸ್ ಪ್ರೆಸ್ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ನಟ-ನಟಿಯೂ ತಮ್ಮ ವೇತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ ನನಗೆ ಈ ಬಗ್ಗೆ ಅಸಮಾಧಾನವಿಲ್ಲ, ತೃಪ್ತಿಯಿದೆ ಎಂದಿದ್ದಾರೆ.

ನಟಿಯಾಗಿ ನನಗೆ ಉತ್ತಮ ಸಂಭಾವನೆ ನೀಡಿಲ್ಲ ಎಂಬ ಬಗ್ಗೆ ನಾನೆಲ್ಲಿಯೂ ಹೇಳಿಕೊಂಡಿಲ್ಲ. ನಿಜ ಹೇಳಬೇಕೆಂದರೆ ನನಗೆ ಸಂತೋಷವಿದೆ. ಇಂದು ಪ್ರೇಕ್ಷಕರು ಉತ್ತಮ ಸಿನಿಮಾ ಮತ್ತು ಕಥೆಯನ್ನು ಬಯಸುತ್ತಾರೆಯೇ ಹೊರತು ನಟ-ನಟಿಯರ ಸಂಭಾವನೆ ಎಷ್ಟೆಂದು ತಿಳಿದುಕೊಳ್ಳಲು ಹೆಚ್ಚು ಇಷ್ಟಪಡುವುದಿಲ್ಲ ಎಂದು ಅವರು ಕರೀನಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.