ಬಾಲಿವುಡ್

ಬುಸಾನ್ ನಲ್ಲಿ 'ಭಜರಂಗಿ ಭಾಯಿಜಾನ್' ಕರತಾಡನ

೨೦ನೆಯ ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ಸುಪರ್ಸ್ಟಾರ್ ಸಲ್ಮಾನ್ ಖಾನ್ ಅವರ 'ಭಜರಂಗಿ ಭಾಯಿಜಾನ್' ಸಿನೆಮಾ ಬಹಳ ಜನಪ್ರಿಯವಾಗಿ

ಬುಸಾನ್ ನಲ್ಲಿ 'ಭಜರಂಗಿ ಭಾಯಿಜಾನ್' ಕರತಾಡನ
'ಭಜರಂಗಿ ಭಾಯಿಜಾನ್' ಸಿನೆಮಾದ ಸ್ಟಿಲ್
Published On :

ಬುಸಾನ್: ೨೦ನೆಯ ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ಸುಪರ್ಸ್ಟಾರ್ ಸಲ್ಮಾನ್ ಖಾನ್ ಅವರ 'ಭಜರಂಗಿ ಭಾಯಿಜಾನ್' ಸಿನೆಮಾ ಬಹಳ ಜನಪ್ರಿಯವಾಗಿ, ಪ್ರೇಕ್ಷಕರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ತೋರಿದ್ದಾರೆ ಎಂದು ನಿರ್ದೇಶಕ ಕಬೀರ್ ಖಾನ್ ತಿಳಿಸಿದ್ದಾರೆ.

"ಅತಿ ಹೆಚ್ಚು ಸಂಖ್ಯೆಯ ಪ್ರೇಕ್ಷಕರು.. #ಬುಸಾನ್ ನಲ್ಲಿ ಭಜರಂಗಿ ಭಾಯಿಜಾನ್ ೫೦೦೦ ಜನ... ಕರತಾಡನ.. ಅದ್ಭುತ ಶಕ್ತಿ ಇದು" ಎಂದು ಕಬೀರ್ ಟ್ವೀಟ್ ಮಾಡಿದ್ದಾರೆ.

ಅಕ್ಟೋಬರ್ ೧ ರಂದು ಪ್ರಾರಂಭವಾದ ಚಲನಚಿತೋತ್ಸವದಲ್ಲಿ, ಮಂಗಳವಾರ ಈ ಸಿನೆಮಾ ಪ್ರದರ್ಶಿಸಲಾಗಿದ್ದು, ಶನಿವಾರ ಉತ್ಸವಕ್ಕೆ ತೆರೆ ಬೀಳಲಿದೆ.

ಈ ಸಿನೆಮಾದಲ್ಲಿ ಕರೀನಾ ಕಪೂರ್, ನವಾಜುದ್ದೀನ್ ಸಿದ್ದಿಕಿ ಮತ್ತು ಬಾಲನಟಿ ಹರ್ಶಾಲಿ ಮಲ್ಹೋತ್ರ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.