ಬಾಲಿವುಡ್

೨೦೦ ಕೋಟಿ ಕ್ಲಬ್ ಸೇರಿದ 'ಪ್ರೇಮ್ ರತನ್ ಧನ್ ಪಾಯೋ'

ಸೂರಜ್ ಬರ್ಜತ್ಯ ನಿರ್ದೇಶನದ 'ಪ್ರೇಮ್ ರತನ್ ಧನ್ ಪಾಯೋ'(ಪಿ ಆರ್ ಡಿ ಪಿ) ಭಾರತದಲ್ಲಿ ೨೦೦ ಕೋಟಿ ಗಳಿಕೆ ಕಂಡಿದೆ.

೨೦೦ ಕೋಟಿ ಕ್ಲಬ್ ಸೇರಿದ 'ಪ್ರೇಮ್ ರತನ್ ಧನ್ ಪಾಯೋ'
'ಪ್ರೇಮ್ ರತನ್ ಧನ್ ಪಾಯೋ' ಸಿನೆಮಾ ಸ್ಟಿಲ್
Published On :

ನವದೆಹಲಿ: ಸೂರಜ್ ಬರ್ಜತ್ಯ ನಿರ್ದೇಶನದ 'ಪ್ರೇಮ್ ರತನ್ ಧನ್ ಪಾಯೋ'(ಪಿ ಆರ್ ಡಿ ಪಿ) ಭಾರತದಲ್ಲಿ ೨೦೦ ಕೋಟಿ ಗಳಿಕೆ ಕಂಡಿದೆ.

೧೬ ವರ್ಷಗಳ ನಂತರ ಸಲ್ಮಾನ್ ಖಾನ್ ಮತ್ತು ಬರ್ಜತ್ಯ ಜೋಡಿಯಲ್ಲಿ ಮೂಡಿ ಬಂದ ಹಿಂದಿ ಸಿನೆಮಾ ೧೪ ದಿನಗಳಲ್ಲಿ ೨೦೧.೫೨ ಕೋಟಿ ಗಳಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಸಿನೆಮಾದಲ್ಲಿ ಸೋನಮ್ ಕಪೂರ್, ಅನುಪಮ್ ಖೇರ್, ನೀಲ್ ನಿತಿನ್ ಮುಖೇಶ್ ಕೂಡ ಅಭಿನಯಿಸಿದ್ದಾರೆ.

೬೦ ಕೋಟಿ ನಿರ್ಮಾಣ ಬಜೆಟ್ ಮತ್ತು ೨೦ ಕೋಟಿ ಪ್ರಚಾರ ಬಜೆಟ್ ನಲ್ಲಿ ನಿರ್ಮಾಣಗೊಂಡ  ಈ ಸಿನೆಮಾ ನವೆಂಬರ್ ೧೨ ರಂದು ಬಿಡುಗಡೆಯಾಗಿತ್ತು.

"೨೦೧೫ರಲ್ಲಿ ೨೦೦ ಕೋಟಿ ಗಳಿಕೆ ದಾಟಿದ ಎರಡನೇ ಸಿನೆಮಾ ಪಿ ಆರ್ ಡಿ ಪಿ. ೧೪ ದಿನಗಳಲ್ಲಿ ಭಾರತದಾದ್ಯಂತ ಕಂಡ ಗಳಿಕೆ ೨೦೧.೫೨ ಕೋಟಿ" ಎಂದು ಚಿತ್ರೋದ್ಯಮದ ವ್ಯವಹಾರ ಪಂಡಿತ ಕೋಮಲ್ ನಾಥ ಟ್ವೀಟ್ ಮಾಡಿದ್ದಾರೆ.

ಫಾಕ್ಸ್ ಸ್ಟುಡಿಯೋ ಅರ್ಪಿಸಿದ ಈ ಕೌಟುಂಬಿಕ ಮನರಂಜನಾ ಚಿತ್ರವನ್ನು ರಾಜಶ್ರಿ ಪ್ರೊಡಕ್ಷನ್ಸ್ ನಿರ್ಮಿಸಿತ್ತು. ಈ ಸಿನೆಮಾದ ತೆಲುಗು ಮತ್ತು ತಮಿಳು ಅವತರಿಣೆಕೆಗಳೂ ಕೂಡ ತೆರೆ ಕಂಡಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.