ಕಲ್ಪನಾ ಚಾವ್ಲಾ ಪಾತ್ರದಲ್ಲಿ ಪಿಂಕಿ ಚೋಪ್ರಾ
ಜಗತ್ತಿಗೆ ಬಾಲಿವುಡ್ ಇನ್ನೊಂದು ಸಿಹಿ ಹಂಚುತ್ತಿದೆ. ಗಗನಯಾತ್ರಿ ಕಲ್ಪನಾ ಚಾವ್ಲಾ ಈಗ ಸಿನಿಮಾ...

Published On :
ಜಗತ್ತಿಗೆ ಬಾಲಿವುಡ್ ಇನ್ನೊಂದು ಸಿಹಿ ಹಂಚುತ್ತಿದೆ. ಗಗನಯಾತ್ರಿ ಕಲ್ಪನಾ ಚಾವ್ಲಾ ಈಗ ಸಿನಿಮಾ ಆಗ್ತಿದ್ದಾರೆ!
2003ರಲ್ಲಿ ನಾಸಾದ ವ್ಯೋಮಾನೌಕೆಯಲ್ಲಿ ಭೂಮಿಗೆ ವಾಪಸಾಗುತ್ತಿದ್ದಾಗ ಆಕಸ್ಮಿಕ ಅವಘಡದಲ್ಲಿ ಅಮರಳಾದ ಕಲ್ಪನಾ ಚಾವ್ಲಾ ಬದುಕಿನ ಬಗ್ಗೆ ಕುತೂಹಲವಂತೂ ಇದ್ದೇ ಇದೆ. 31 ದಿನ, 14 ಗಂಟೆ, 54 ನಿಮಿಷ ಆಗಸದಲ್ಲಿ ಕಳೆದ ಈಕೆಯ ಅನುಭವ ಇಲ್ಲಿಯ ತನಕ ಬಹಿರಂಗಗೊಂಡಿಲ್ಲ.
ಅವನ್ನೆಲ್ಲ ತೆರೆಮೇಲೆ ತೋರಿಸುವುದಾದರೆ ಸಿನಿಮಾ ರೋಚಕಗೊಳ್ಳುವುದು ನಿಶ್ಚಿತ. ಅಂದಹಾಗೆ, ಇಲ್ಲಿ ಕಲ್ಪನಾ ಚಾವ್ಲಾ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ಪ್ರಿಯಾಂಕಾ ಚೋಪ್ರಾ! `ವಯಾಕಾಮ್ 18' ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಈ ಪ್ರೊಡಕ್ಷನ್ ಸಂಸ್ಥೆ ಈಗಾಗಲೇ ಪ್ರಿಯಾಂಕಾ ಚೋಪ್ರಾಳೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ಮುಗಿಸಿದೆ.
ಪಿಂಕಿ ಈ ಕತೆಯನ್ನು ಒಪ್ಪಿ, ನಟಿಸಲು ಆಸಕ್ತಿಯನ್ನೂ ತೋರಿಸಿದ್ದಾರಂತೆ. ಈಗಾಗಲೇ ಮೇರಿಕೋಂ ಬಯೋಪಿಕ್‍ನಲ್ಲಿ ನಟಿಸಿ, ಯಶಸ್ಸು ಕಂಡ ಪಿಂಕಿಗೆ ಇದು ಎರಡನೇ ಜೀವನಚಿತ್ರ. ಪಿಂಕಿ ಈಗ ಅಮೆರಿಕದ `ಕ್ವಾಂಟಿಕೋ' ಟಿವಿ ಶೋ ಮತ್ತು `ಬಾಜಿರಾವ್ ಮಸ್ತಾನಿ' ಚಿತ್ರೀಕರಣದ ಬ್ಯುಸಿಯಲ್ಲಿದ್ದಾಳೆ.
`ಬಾಜೀರಾವ್ ಮಸ್ತಾನಿ'ಯಲ್ಲಿ ಮರಾಠಾ ಪೇಶ್ವೆ ಬಾಜೀರಾವ್‍ನ ಮೊದಲನೇ ಪತ್ನಿ ಕಾಶಿಬಾಯಿ ಆಗಿ ನಟಿಸುತ್ತಿದ್ದರೂ ಈ ಪಾತ್ರ ಸಂಪೂರ್ಣ ಬಯೋಪಿಕ್ ಅಲ್ಲ. ಇದರ ಶೂಟಿಂಗ್ ಮುಗಿದ ಮೇಲೆ ಪಿಂಕಿ ಮತ್ತೆ ಅಮೆರಿಕದತ್ತ ಮುಖ ಮಾಡಲಿದ್ದಾರಂತೆ. ನಾಸಾಗೆ ಭೇಟಿಕೊಟ್ಟು ಕಲ್ಪನಾ ಚಾವ್ಲಾ ಬಗ್ಗೆ ಸ್ಟಡಿ ಮಾಡಲಿದ್ದಾರಂತೆ. ಒಟ್ಟಿನಲ್ಲಿ ಪಿಂಕಿಗೆ ಭಾರತ- ಅಮೆರಿಕ ಓಡಾಟ ಇನ್ನೂ ಹೆಚ್ಚುವುದಂತೂ ಗ್ಯಾರಂಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


