ಗೀತಾ ಬಾಲಿಯಾಗಿ ವಿದ್ಯಾ ಬಾಲನ್..
ಡರ್ಟಿ ಪಿಕ್ಚರ್ ಖ್ಯಾತಿಯ ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಇದೀಗ ಮೊದಲ ಸಲ ಮರಾಠಿ ಭಾಷೆಯ ಚಿತ್ರವೊಂದರಲ್ಲಿ...

ಡರ್ಟಿ ಪಿಕ್ಚರ್ ಖ್ಯಾತಿಯ ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಇದೀಗ ಮೊದಲ ಸಲ ಮರಾಠಿ ಭಾಷೆಯ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಜನಪ್ರಿಯ ನಾಯಕಿ ಮತ್ತು ನಟ ಶಮ್ಮಿ ಕಪೂರ್ ಅವರ ಪತ್ನಿಯಾಗಿದ್ದ ಗೀತಾ ಬಾಲಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮರಾಠಿಯಲ್ಲಿ ತಯಾರಾಗುತ್ತಿರುವ "ಏಕ್ ಅಲ್ಬೆಲಾ' ಚಿತ್ರದಲ್ಲಿ ವಿದ್ಯಾ ನಟಿಸುತ್ತಿದ್ದಾರೆ. ಈ ಚಿತ್ರ ಹಿಂದಿ ಮತ್ತು ಮರಾಠಿ ನಟ-ನಿರ್ಮಾಪಕ-ನಿರ್ದೇಶಕ ಭಗವಾನ್ ದಾದಾ ಅವರ ಕುರಿತದ್ದಾಗಿದೆ.'ಅವರ ಕುರಿತು ಶೇಖರ ಸರ್ತಾಂದೆಲ್ ಚಿತ್ರ ನಿರ್ಮಿಸುತ್ತಿದ್ದಾರೆ.
ಭಗವಾನ್ ಕುರಿತಾದ ಚಿತ್ರದಲ್ಲಿ ಗೀತಾ ಬಾಲಿ ಅವರ ವಿಷಯವಿಲ್ಲದಿದ್ದರೆ ಹೇಗೆ ಎಂದು ಗೀತಾ ಬಾಲಿಯ ಪಾತ್ರ ಕೂಡಾ ಚಿತ್ರದಲ್ಲಿದೆಯಂತೆ. ಮರಾಠಿ ನಟ ಮಂಗೇಶ್ ದೇಸಾಯಿ ಅವರು ಭಗವಾನ್ ಪಾತ್ರ ಮಾಡಿದರೆ, ವಿದ್ಯಾ ಬಾಲನ್ ಅವರು ಗೀತಾ ಬಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರದಲ್ಲಿ ವಿದ್ಯಾ ಬಾಲನ್, ಗೀತಾ ಬಾಲಿಯಾಗಿ ವಿಶೇಷ ಮತ್ತು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 50ರ ದಶಕದ ನಟಿಯ ಮೇಕಪ್, ಕಾಸ್ಟೂಮ್‌ಗಳನ್ನು ತಕ್ಕ ಹಾಗೆ ವಿದ್ಯಾಗೆ ಡಿಸೈನ್ ಮಾಡಲಾಗಿದೆ. ವಿದ್ಯಾಧರ್ ಬಟ್ಟೆ ಮೇಕಪ್ ಮಾಡಿದರೆ, ಸುಬರ್ಣ ರೈ ಚೌಧರಿ ಅವರು ಕಾಸ್ಟೂಮ್‌ಗಳನ್ನು ಸಿದ್ಧಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


