ಸ್ಲಮ್‌ನಲ್ಲಿ ಸಲ್ಮಾನ್ ಖಾನ್ ದೀಪಾವಳಿ!
ದೇಶದಲ್ಲಿ ಸಹಿಷ್ಣುತೆ ಇರಲಿ, ಅಸಹಿಷ್ಣುತೆ ಇರಲಿ... ಬಾಲಿವುಡ್ ನಟ ಸಲ್ಮಾನ್ ಖಾನ್ ಸ್ಟಾರ್ ಆಗಿಯೇ ಕಾಣಿಸುತ್ತಾರೆ. ಈಗ ಸಲ್ಲು...

ದೇಶದಲ್ಲಿ ಸಹಿಷ್ಣುತೆ ಇರಲಿ, ಅಸಹಿಷ್ಣುತೆ ಇರಲಿ... ಬಾಲಿವುಡ್ ನಟ ಸಲ್ಮಾನ್ ಖಾನ್ ಸ್ಟಾರ್ ಆಗಿಯೇ ಕಾಣಿಸುತ್ತಾರೆ. ಈಗ ಸಲ್ಲು ಮುಂಬೈನ ಧಾರಾವಿ ಸ್ಲಮ್‌ನಲ್ಲಿ ದೀಪಾವಳಿ ಆಚರಿಸಲಿದ್ದಾರೆ. ಇದು ಎರಡು ರೀತಿಯ ಸಂಭ್ರಮ; ಒಂದು ನ.12ಕ್ಕೆ ತೆರೆ ಕಾಣಲಿರುವ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರದ ಪ್ರಮೋಷನ್ ಮತ್ತು ಬೆಳಕಿನ ಹಬ್ಬದ ಸಡಗರ.
ಧಾರಾವಿ ಸ್ಲಮ್ಮಿನಲ್ಲೇ ಒಂದು ಮ್ಯೂಸಿಕ್ ಬ್ಯಾಂಡ್ ಇದೆ. ಧಾರಾವಿ ರಾಕ್ಸ್ ಎಂಬ ತಂಡವನ್ನು ಕಟ್ಟಿಕೊಂಡಿರುವ ಅಲ್ಲಿನ ಹುಡುಗರು ಅದ್ಧೂರಿಯ ಉಪಕರಣಗಳನ್ನೇನೂ ಇಟ್ಟುಕೊಂಡಿಲ್ಲ. ವೇಸ್ಟ್ ಬಕೆಟ್ ಹಳೇ ಪಾತ್ರೆ, ಸೌಟುಗಳಲ್ಲೇ ಈ ಬ್ಯಾಂಡ್‌ನ್ನು ರೂಪಿಸಿಕೊಂಡವರು. ಸಲ್ಮಾನ್ ಖಾನ್‌ನ ದೀಪಾವಳಿ ಸಂಭ್ರಮದಲ್ಲಿ 'ಧಾರಾವಿ ರಾಕ್ಸ್' ತಂಡವೂ ಪಾಲ್ಗೊಳ್ಳಲಿದೆ.
ಸಲ್ಲು ಪಟಾಕಿ ಸಿಡಿಸಿ, ಮಕ್ಕಳೊಂದಿಗೆ ಕುಣಿಯುವುದಿಲ್ಲವಂತೆ. ಸಲ್ಮಾನ್ ಖಾನ್ ಇವರೊಟ್ಟಿಗೆ ಉಪಹಾರ ಸೇವಿಸಲಿದ್ದಾರೆ. ಸಾಧ್ಯವಾದರೆ ಈ ಚಿತ್ರದ ನಾಯಕಿ ಸೋನಂ ಕಪೂರ್ ಸಹ ಸಲ್ಲುವಿನ ಸ್ಪೆಷೆಲ್ ದೀಪಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


