ಬಾಲಿವುಡ್

ಆಮೀರ್ ಈಗ 95 ಕೆ.ಜಿ !

ಬಾಲಿವುಡ್ ನಟ ಆಮೀರ್ ಖಾನ್ ತಮ್ಮ ಮುಂದಿನ ಸಿನಿಮಾ 'ದಂಗಲ್' ನಲ್ಲಿ ಕುಸ್ತಿಪಟು ಪಾತ್ರಕ್ಕೆ ಬೇಕಾಗಿ 95 ಕೆ.ಜಿವರೆಗೆ ತೂಕವನ್ನು ಹೆಚ್ಚಿಸಿಕೊಂಡಿದ್ದಾರಂತೆ...

ಆಮೀರ್  ಈಗ 95 ಕೆ.ಜಿ !
ತಮ್ಮ ಮುಂದಿನ ಸಿನಿಮಾ 'ದಂಗಲ್' ಗಾಗಿ ಆಮೀರ್ 95 ಕೆ.ಜಿ ತೂಕ ಗಳಿಸಿದ್ದಾರೆ
Published On :

ಮುಂಬೈ:ಸಿನಿಮಾದ ಪಾತ್ರಕ್ಕೆ ತಕ್ಕಂತೆ ದೇಹದ ತೂಕವನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ಬಾಲಿವುಡ್ ನಟ ಆಮೀರ್ ಖಾನ್  ಶೈಲಿ.

ತಮ್ಮ ಮುಂದಿನ ಸಿನಿಮಾ 'ದಂಗಲ್' ನಲ್ಲಿ ಕುಸ್ತಿಪಟು ಪಾತ್ರವನ್ನು ಮಾಡುತ್ತಿರುವ ಆಮೀರ್ ಅದಕ್ಕೆ ಬೇಕಾಗಿ 95 ಕೆ.ಜಿವರೆಗೆ ತೂಕವನ್ನು ಹೆಚ್ಚಿಸಿಕೊಂಡಿದ್ದಾರಂತೆ.  "ನನ್ನ ಪಾತ್ರಕ್ಕೆ ಬೇಕಾದಷ್ಟು ತೂಕವನ್ನು ಗಳಿಸಿಕೊಂಡಿದ್ದೇನೆ. ಆದರೆ ನನಗೆ ಈಗ ಉಸಿರಾಡಲು ಕಷ್ಟವಾಗುತ್ತಿದೆ. ನನ್ನ ಶೂವಿನ ಲೇಸ್ ಕಟ್ಟಲು ಬಗ್ಗಿದಾಗ ನನ್ನ ಹೊಟ್ಟೆ ತಗುಲುತ್ತದೆ. 20 ಸೆಕೆಂಡು ಕಳೆದ ನಂತರ ನಾನು ಉಸಿರಾಡಬೇಕಾಗುತ್ತದೆ.'' ಅಂತ ತಮ್ಮ ತೂಕ ಹೆಚ್ಚಾದುದರಿಂದ ಪಡುತ್ತಿರುವ ಕಷ್ಟದ ಬಗ್ಗೆ ಸುದ್ದಿಗಾರರ ಬಳಿ ಹಂಚಿಕೊಂಡರು.

 ನನ್ನ ಪತ್ನಿ ಮತ್ತು ತಾಯಿಗೆ ನನ್ನ ಆರೋಗ್ಯದ ಬಗ್ಗೆ  ಚಿಂತೆ ಆಗಿದೆ. ನಾನು ಆರೋಗ್ಯದ ಜೊತೆ ಆಟವಾಡುತ್ತೇನೆ ಎಂದು ಅವರು ಬೈಯುತ್ತಾರೆ. ನನಗೂ ಹಾಗೆ ಅನ್ನಿಸುತ್ತದೆ ಎಂದು ತಮ್ಮ ಮನದಾಳವನ್ನು ಹಂಚಿಕೊಂಡರು.

ಈ ವರ್ಷಾಂತ್ಯಕ್ಕೆ ದಂಗಲ್ ಸಿನಿಮಾದ ಶೂಟಿಂಗ್ ಮುಗಿಯುತ್ತದೆ. ಮತ್ತೆ ಐದು ತಿಂಗಳಲ್ಲಿ ನನ್ನ ತೂಕ ಕಳೆದುಕೊಂಡು ಮೊದಲಿನಂತಾಗುತ್ತೇನೆ. ಮುಂದಿನ ವರ್ಷ ಜೂನ್ ಗೆ ಮತ್ತೊಂದು ಸಿನಿಮಾದ ಪ್ರೊಜೆಕ್ಟ್ ಶುರುವಾಗುತ್ತದೆ. ಅದು ಮುಗಿಯುವ ವೇಳೆಗೆ ನನ್ನ ಲುಕ್ ಪಿಕೆಯಂತಾಗುತ್ತದೆ ಎಂದು ತಮ್ಮ ತೂಕ ಬದಲಾವಣೆ ಮಾಡಿಕೊಳ್ಳುವ ಶೈಲಿಯನ್ನು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.