ಬಾಲಿವುಡ್

ಸನ್ನಿ ಲಿಯೋನ್ ಗೆ ಮುಂಬೈನಲ್ಲಿ ಬಾಡಿಗೆ ಮನೆ ಕೂಡ ಸಿಗುತ್ತಿಲ; ನಟಿಯೊಬ್ಬರ ಸಹಾಯಹಸ್ತ

ಇತ್ತೀಚೆಗೆ ಎರಡು ಹಿಂದಿ ಸಿನೆಮಾಗಳಲ್ಲಿ ನಟಿಸಿ ಹಲವರ ಮನಗೆದ್ದಿರುವ ನಟಿ ಸನ್ನಿ ಲಿಯೋನ್ ಅವರು ಮುಂಬೈ ನಲ್ಲಿ...

ಸನ್ನಿ ಲಿಯೋನ್ ಗೆ ಮುಂಬೈನಲ್ಲಿ ಬಾಡಿಗೆ ಮನೆ ಕೂಡ ಸಿಗುತ್ತಿಲ; ನಟಿಯೊಬ್ಬರ ಸಹಾಯಹಸ್ತ
ಸನ್ನಿ ಲಿಯೋನ್
Published On :

ಮುಂಬೈ: ಇತ್ತೀಚೆಗೆ ಎರಡು ಹಿಂದಿ ಸಿನೆಮಾಗಳಲ್ಲಿ ನಟಿಸಿ ಹಲವರ ಮನಗೆದ್ದಿರುವ ನಟಿ ಸನ್ನಿ ಲಿಯೋನ್ ಅವರು ಮುಂಬೈ ನಲ್ಲಿ ವಾಸಯೋಗ್ಯ ಮನೆ ಹಿಡಿಯಲು ಹರಸಾಹಸ ಮಾಡುತ್ತಿದ್ದಾರೆ. ಪ್ರತಿ ಸಿನೆಮಾದಲ್ಲೂ ತಮ್ಮ ನಟನಾ ಕೌಶಲ ಹೆಚ್ಚಿಸಿಕೊಂಡಿರುವ ಈ ನಟಿಯನ್ನು ಇತ್ತೀಚೆಗೆ ತಮ್ಮ ಬಾಡಿಗೆ ಮನೆಯಿಂದ ಹೊರದಬ್ಬಲಾಗಿದೆ!

ಅವರು ಈಗ ಹಿಂದಿ ಚಿತ್ರಗಳಲ್ಲಿ ನಟಿಸುವುದಕ್ಕೂ ಮುಂಚೆ ಪೋರ್ನ್ ಸಿನೆಮಾಗಳಲ್ಲಿ ನಟಿಸಿದ್ದರು ಎಂಬ ಒಂದೇ ಕಾರಣಕ್ಕೆ ಇವರಿಗೆ ಬಾಡಿಗೆಗೆ ಮನೆ ನೀಡಲು ಅಥವಾ ಮಾರಾಟ ಮಾಡಲು ಮಾಲೀಕರು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಇವರ ಸ್ಥಿತಿ ತಿಳಿದ ನಟಿ ಸೆಲಿನಾ ಜೇಟ್ಲಿ ಸಹಾಯಹಸ್ತ ಚಾಚಿದ್ದು ತನ್ನ ಅಪಾರ್ಟ್ಮೆಂಟ್ ಬಾಡಿಗೆಗೆ ನೀಡಲು ಮುಂದೆ ಬಂದಿದ್ದಾರೆ.

ಆದರೆ ಮತ್ತೊಂದು ಮೂಲದ ಪ್ರಕಾರ ಸನ್ನಿ ತನ್ನ ಅಪಾರ್ಟ್ಮೆಂಟ್ ಅನ್ನು ಸ್ವಚ್ಚವಾಗಿ ಇಟ್ಟುಕೊಳ್ಳದ ಕಾರಣ ಮನೆ ತೊರೆಯಲು ಮಾಲೀಕರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಹೋಟೆಲ್ ಒಂದರಲ್ಲಿ ತಂಗಿರುವ ಸನ್ನಿ ಅಪಾರ್ಟ್ಮೆಂಟ್ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.