ಪಿಕು ಆದ್ಮೇಲೆ ತನಿಷ್ಕ್ ಗೆ ರೂಪದರ್ಶಿ
ಸಾಮಾನ್ಯ ಮಧ್ಯಮ ವರ್ಗದವರ ಮನಮುಟ್ಟಬಹುದು ಎಂದುಕೊಂಡಿದ್ದ `ಪಿಕು' ಅಂದುಕೊಂಡಂತೆ ಎಲ್ಲರ ಹೃದಯ ಗೆಲ್ಲಲಿಲ್ಲ. ಚಿತ್ರದಲ್ಲಿ ನಟಿಸುವಾಗ ಬಹುತೇಕ ದೃಶ್ಯಗಳು ನನ್ನಪ್ಪನನ್ನು ನೆನಪಿಸಿದವು ಎನ್ನುತ್ತಿದ್ದ ದೀಪಿಕಾಳ ಗಿಮಿಕ್ಕೂ ಗಿಟ್ಟಲಿಲ್ಲ. ಈಗ ಮತ್ತೊಮ್ಮೆ ಬಾಲ್ಯದ ದಿನಗಳನ್ನು ಸ್ಮರಿಸುವಂತೆ...

ಸಾಮಾನ್ಯ ಮಧ್ಯಮ ವರ್ಗದವರ ಮನಮುಟ್ಟಬಹುದು ಎಂದುಕೊಂಡಿದ್ದ `ಪಿಕು' ಅಂದುಕೊಂಡಂತೆ ಎಲ್ಲರ ಹೃದಯ ಗೆಲ್ಲಲಿಲ್ಲ. ಚಿತ್ರದಲ್ಲಿ ನಟಿಸುವಾಗ ಬಹುತೇಕ ದೃಶ್ಯಗಳು ನನ್ನಪ್ಪನನ್ನು ನೆನಪಿಸಿದವು ಎನ್ನುತ್ತಿದ್ದ ದೀಪಿಕಾಳ ಗಿಮಿಕ್ಕೂ ಗಿಟ್ಟಲಿಲ್ಲ. ಈಗ ಮತ್ತೊಮ್ಮೆ ಬಾಲ್ಯದ ದಿನಗಳನ್ನು ಸ್ಮರಿಸುವಂತೆ ಮಾಡಿ, ಭಾವುಕಳಾಗುವಂತೆ ಮಾಡಿದೆ ಎನ್ನುತ್ತಿದ್ದಾಳೆ ದೀಪಿಕಾ.
ಕಾರಣ ವೇನು ಗೊತ್ತಾ? ತನಿಷ್ಕ್ ಗೆ ರೂಪದರ್ಶಿಯಾಗುವ ಮೂಲಕ ಅವಳಾಯ್ಕೆ ಪ್ರಗತಿಪರ ಎನಿಸಿಕೊಂಡಿದೆ. ಕುಟುಂಬದೊಂದಿಗೆ ಬೆಂಗಳೂರಿನ ತನಿಷ್ಕ್ ಮಳಿಗೆಗೆ ಹೋಗುತ್ತಿದ್ದ ನೆನಪುಗಳು ಅವಳ ಮನದಲ್ಲಿ ಮಾಸದಂತೆ ಇವೆಯಂತೆ. ಮದುವೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಬ್ರ್ಯಾಂಡ್‍ನೊಂದಿಗೆ ಗುರುತಿಸಿಕೊಳ್ಳುತ್ತಿರುವುದು ಅವಳಿಗೆ ಎಲ್ಲಿಲ್ಲದ ಖುಷಿ ತಂದಿದೆಯಂತೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಷ್ಕ್ ಉತ್ಪನ್ನಗಳನ್ನು ಪ್ರಚಾರಪಡಿಸುವ ಹೊಸದೊಂದು ಕಾರ್ಯಕ್ಕೆ ದೀಪಿಕಾ ಮುಂದಾಗಿದ್ದಾಳೆ. ಇದಕ್ಕಿಂತ ದೊಡ್ಡ ಗೌರವ ಇನ್ನೇನು ಬೇಕು?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


