ಬಾಲಿವುಡ್

ಬ್ಯಾಡ್ ಬಾಯ್ನ ಗುಡ್ ಆನ್ಸರ್!

ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆಗೆ ಜೋಧ್‍ಪುರ್ ಕೋರ್ಟ್‍ಗೆ ಜೋಶಿಲ್ಲದೇ ಹಾಜರಾಗಿದ್ದ ಸಲ್ಮಾನ್ ಖಾನ್. ಕೋರ್ಟ್ ಆತನ ಧರ್ಮದ ಬಗ್ಗೆ ಕೇಳಿದ ಪ್ರಶ್ನೆಗೆ ಎಲ್ಲರೂ ಶಹಬ್ಬಾಸ್ ಎನ್ನುವಂತೆ ಉತ್ತರಿಸಿದ್ದಾನೆ...

ಬ್ಯಾಡ್ ಬಾಯ್ನ ಗುಡ್ ಆನ್ಸರ್!
ಬಾಲಿವುಡ್ ನಟ ಸಲ್ಮಾನ್ ಖಾನ್
Published On :

ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆಗೆ ಜೋಧ್‍ಪುರ್ ಕೋರ್ಟ್‍ಗೆ ಜೋಶಿಲ್ಲದೇ ಹಾಜರಾಗಿದ್ದ ಸಲ್ಮಾನ್ ಖಾನ್. ಕೋರ್ಟ್ ಆತನ ಧರ್ಮದ ಬಗ್ಗೆ ಕೇಳಿದ ಪ್ರಶ್ನೆಗೆ ಎಲ್ಲರೂ ಶಹಬ್ಬಾಸ್ ಎನ್ನುವಂತೆ ಉತ್ತರಿಸಿದ್ದಾನೆ.

ಅಮ್ಮ ಹಿಂದು, ಅಪ್ಪ ಮುಸ್ಲಿಂ ಆದ್ರಿಂದ ನಾನು `ಇಂಡಿಯನ್' ಎನ್ನುವ ಮೂಲಕ ಎಲ್ಲರಿಗೂ ಎಲಾ ಇವ್ನಾ ಎನ್ನುವಂತೆ ಮಾಡಿದ್ದಾನೆ. ಅಷ್ಟೇ ಅಲ್ಲ, ನೇಪಾಳ ಭೂಕಂಪದಿಂದ ತತ್ತರಿಸಿದ ಸಂತ್ರಸ್ತರಿಗೆ ರು.10 ಕೋಟಿ ಪರಿಹಾರ ಹಾಗೂ ತನ್ನೆರಡು ಹೆಲಿಕಾಪ್ಟರ್ ಅನ್ನು ನೀಡಿದ್ದಾ ನಂತೆ. ಸಿಕ್ಕಾಪಟ್ಟೆ ಎಲ್ಲಿರಿಗೂ ಸಹಾಯ ಮಾಡುತ್ತಿರುವ ಸಲ್ಮಾನ್ ಇತ್ಲಾಗೆ ಸಿಕ್ಕಾಪಟ್ಟೆ ಒಳ್ಳೆಯ ವನಾಗ್ತಿದ್ದಾನೆ!

ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ದಿಯಾರೂ ಹಳ್ಳಿಯ ಆರು ಮಂದಿ ಕುಟುಂಬದ ಹಣೆಬರಹವನ್ನೇ ಬದಲಾಯಿಸಿದ್ದಾನಂತೆ. ಹೇಗೆ ಗೊತ್ತಾ? `ಅಪ್ಲಿಕೇಷನ್' ಚಿತ್ರೀಕರಣದ
ವೇಳೆ ಸಲ್ಮಾನ್ ಈ ಕುಟುಂಬದ ತಾಯಿ ಜೈನಾ ಬೇಗಮ್ ಳನ್ನು ಭೇಟಿಯಾಗಿದ್ನಂತೆ. ತನ್ನ ವಿಧವೆ ಮಗಳು, ನಾಲ್ಕು ಮೊಮ್ಮಕ್ಕಳನ್ನು ಸಾಕಲು ಈ ವೃದ್ಧ ವಿಧವೆ ಸಿಕ್ಕಾಪಟ್ಟೆ ಪಾಡುಪಟ್ತಿದ್ಲಂತೆ. ಆಕೆಯ 18 ವರ್ಷದ ಮೊಮ್ಮಗನಿಗೆ ಸಿನಿಮಾ ಸೆಟ್‍ನಲ್ಲಿ ಕೆಲಸ ಕೊಟ್ಟಿದ್ದಲ್ಲದೇ, ಆತನನ್ನು ಮುಂಬೈಗೂ ಕರೆದುಕೊಂಡು ಹೋಗ್ತಾನಂತೆ ಈ ದಬಾಂಗ್ ಬಾಯ್. ವೆರಿ ಗುಡ್ ಸಲ್ಮಾನ್, ಕೀಪ್ ಇಟ್ ಅಪ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.