ಬಾಲಿವುಡ್

ರಾ ರಾ... ಲಾರಾ..!

ಮಾಜಿ ವಿಶ್ವಸುಂದರಿ ಲಾರಾ ದತ್ತಾ ಮತ್ತೆ ತೆರೆ ಮೇಲೆ ಬರಲಿದ್ದಾಳೆ. ಸಿಂಗ್ ಈಸ್ ಬ್ಲಿಂಗ್ ಎಂಬ ಕಾಮಿಡಿ ಚಿತ್ರದ ಮೂಲಕ ಲಾರಾ ಕಂಬ್ಯಾಕ್ ಮಾಡುತ್ತಿದ್ದಾಳೆ...

ರಾ ರಾ... ಲಾರಾ..!
ಮಾಜಿ ವಿಶ್ವಸುಂದರಿ ಲಾರಾ ದತ್ತಾ
Published On :

ಮಾಜಿ ವಿಶ್ವಸುಂದರಿ ಲಾರಾ ದತ್ತಾ ಮತ್ತೆ ತೆರೆ ಮೇಲೆ ಬರಲಿದ್ದಾಳೆ. ಸಿಂಗ್ ಈಸ್ ಬ್ಲಿಂಗ್ ಎಂಬ ಕಾಮಿಡಿ ಚಿತ್ರದ ಮೂಲಕ ಲಾರಾ ಕಂಬ್ಯಾಕ್ ಮಾಡುತ್ತಿದ್ದಾಳೆ.

ಟೆನ್ನಿಸ್ ತಾರೆ ಭೂಪತಿಯ ಪತ್ನಿಯಾಗಿ ಒಂದು ಮಗುವಿನ ತಾಯಿಯಾಗಿ ಕೆಲವು ವರ್ಷ ನಟನೆಯಿಂದ ದೂರ ಉಳಿದಿದ್ದ ಲಾರಾ ಈ ಅವಧಿಯಲ್ಲಿ ಸುಮಾರು ಬಾರಿ ಕಂಬ್ಯಾಕ್ ಸುದ್ದಿ ನೀಡಿದ್ದಳು. ಆದರೆ ಅವೆಲ್ಲ ಸುದ್ದಿಯಾಗೇ ಉಳಿದು ಬದಿಗೆ ಸರಿದಿದ್ದವು.

ಸ್ವಂತ ನಿರ್ಮಾಣದಲ್ಲಿ ಚಲೋ ಚೈನಾ ಎಂಬ ಸಿನಿಮಾ ಘೋಷಿಸಿದ್ದ ಲಾರಾ ದತ್ತ, ಅದನ್ನೀಗ ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದಾಳೆ. ಪಿತೂರ್ ಚಿತ್ರದಲ್ಲಿ ನಟಿಸುವ ಸುದ್ದಿಯೂ ಸದ್ಯಕ್ಕಿಲ್ಲ. ಅಭಿನಹೀ ತೊ ಕಭಿ ನಹೀ ಚಿತ್ರದಲ್ಲಿ ಕೂಡ ಲಾರಾ ನಟಿಸುವುದು ನಿಶ್ಚಯವಿಲ್ಲ. ಹಾಗಾಗಿ ಆಕೆಯ ಮರುಪದಾರ್ಪಣೆ ಚಿತ್ರ ಅಕ್ಷಯ್ ಕುಮಾರ್ ನಾಯಕತ್ವದ ಸಿಂಗ್ ಈಸ್ ಬ್ಲಿಂಗ್ ಎಂಬುದು ಖಾತ್ರಿಯಾಗಿದೆ.

ಲಾರಾ ಬಾಲಿವುಡ್‍ಗೆ ಕಾಲಿಟ್ಟದ್ದು ಕೂಡ ಅಕ್ಷಯ್ ಕುಮಾರ್ ಜೊತೆ ಅಂದಾಜ್ ಚಿತ್ರದಲ್ಲಿ ನಟಿಸುವ ಮೂಲಕವೇ ಎಂಬುದು ವಿಶೇಷ. ಪ್ರಭುದೇವಾ ನಿರ್ದೇಶನದ ಈ ಚಿತ್ರದಲ್ಲಿ ಲಾರಾದತ್ತಾ ಸೋಡಾಗಾಜಿನ ಕನ್ನಡಕದಲ್ಲಿ ಪೆದ್ದಿ ಪಾತ್ರ ನಿರ್ವಹಿಸಲಿದ್ದಾಳೆ. ಆಮಿ ಜಾಕ್ಸನ್ ಕೂಡ ನಟಿಸುತ್ತಿರುವ ಈ ಚಿತ್ರ ಅಕ್ಟೋಬರ್ ಎರಡರಂದು ಬಿಡುಗಡೆ ಆಗಲು ತಯಾರಿ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.