ಬಾಲಿವುಡ್

ಮಹಿಳಾ ದಿನಾಚರಣೆಗೆ ವಿಷಾದ ವ್ಯಕ್ತಪಡಿಸಿದ ಬಾಲಿವುಡ್ ಬೆಡಗಿ

ವಿಶ್ವ ಮಹಿಳಾ ದಿನಾಚರಣೆ ಆಚರಣೆಗೆ ವಿಷಾದ ವ್ಯಕ್ತಪಡಿಸಿರುವ ಬಾಲಿವುಡ್ ಕ್ವೀನ್ ಹಾಗೂ ಖ್ಯಾತ ನಟ ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ ಪ್ರತಿದಿನ ಮಹಿಳೆಯರ ಮೇಲಾಗುತ್ತಿರುವ ಅನ್ಯಾಯ...

ಮಹಿಳಾ ದಿನಾಚರಣೆಗೆ ವಿಷಾದ ವ್ಯಕ್ತಪಡಿಸಿದ ಬಾಲಿವುಡ್ ಬೆಡಗಿ
ಶ್ರದ್ಧಾ ಕಪೂರ್
Published On :

ನವದೆಹಲಿ: ವಿಶ್ವ ಮಹಿಳಾ ದಿನಾಚರಣೆಗೆ ವಿಷಾದ ವ್ಯಕ್ತಪಡಿಸಿರುವ ಬಾಲಿವುಡ್ ಕ್ವೀನ್ ಹಾಗೂ ಖ್ಯಾತ ನಟ ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ ಪ್ರತಿದಿನ ಮಹಿಳೆಯರ ಮೇಲಾಗುತ್ತಿರುವ ಅನ್ಯಾಯ, ದೌರ್ಜನ್ಯವನ್ನು ತಡೆಯಲು ಕೇವಲ ಒಂದು ದಿನ ಆಚರಣೆಯಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಕುರಿತಂತೆ ತಮ್ಮ ಟ್ವಿಟರ್ ಖಾತೆಯ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಶ್ರದ್ಧಾ ಕಪೂರ್, ಪ್ರತಿ 20 ನಿಮಿಷಕ್ಕೊಮ್ಮೆ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಕೇವಲ ಒಂದು ದಿನದ ಆಚರಣೆಯಿಂದ ಪ್ರತಿದಿನ ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಪ್ರತಿದಿನವೂ ಈ ಕುರಿತಂತೆ ಹೋರಾಟವನ್ನು ಮುಂದುವರೆಸಬೇಕು ಎಂದಿದ್ದಾರೆ.

ಇದೇ ವೇಳೆ ನಿಂದನೆ ಮಾಡುವುದು, ದೌರ್ಜನ್ಯ ವೆಸಗುವುದು ಕಸಕ್ಕಿಂತೆ ಕೀಳಾದಂತಹ ಕೆಲಸ ಎಂದಿರುವ ಅವರು, ದೌರ್ಜನ್ಯದ ವಿರುದ್ಧ ಒಂದು ದಿನ ಆಚರಣೆಯನ್ನು ಬಿಟ್ಟು ಪ್ರತಿನಿತ್ಯ ನಿರ್ಭಯದಿಂದ ಹೋರಾಡಿ. ನಿಮ್ಮಲ್ಲಿರುವ ಭಯವನ್ನು ಹೊರಹಾಕಿ, ತಲೆಯೆತ್ತಿ ಓಡಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.