ಬಾಲಿವುಡ್

ರಣಬೀರ್ ಜೊತೆ ತನ್ನ ಕೆಮಿಸ್ಟ್ರಿ ಚೆನ್ನಾಗಿರುತ್ತದೆ ಎಂಬುದು ದೀಪಿಕಾ ಆಲೋಚನೆ: ರಣ್ ವೀರ್

ತನ್ನ ಹಿಂದಿನ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಮತ್ತು ತನ್ನ ಜೋಡಿಯ ಕೆಮಿಸ್ಟ್ರಿ ಚೆನ್ನಾಗಿರುತ್ತದೆ ಎಂಬ ಯೋಚನೆ ದೀಪಿಕಾ ....

ರಣಬೀರ್ ಜೊತೆ ತನ್ನ ಕೆಮಿಸ್ಟ್ರಿ ಚೆನ್ನಾಗಿರುತ್ತದೆ ಎಂಬುದು ದೀಪಿಕಾ ಆಲೋಚನೆ: ರಣ್ ವೀರ್
ಸಂಗ್ರಹ ಚಿತ್ರ
Published On :

ತನ್ನ ಹಿಂದಿನ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಮತ್ತು ತನ್ನ ಜೋಡಿಯ ಕೆಮಿಸ್ಟ್ರಿ ಚೆನ್ನಾಗಿರುತ್ತದೆ ಎಂಬ ಯೋಚನೆ ದೀಪಿಕಾ ಪಡುಕೋಣೆ ಮನಸ್ಸಿನಲ್ಲಿದೆ ಎಂದು ನಟ ಹಾಗೂ ದೀಪಿಕಾ ಗೆಳೆಯ ರಣವೀರ್ ಸಿಂಗ್ ಹೇಳಿದ್ದಾರೆ.

ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯಿಸುತ್ತಿದ್ದಾರೆ. ಈ ಹಿಂದೆ ರಾಮ್ ಲೀಲಾ ಚಿತ್ರದಲ್ಲಿ ಅಭಿನಯಿಸಿದ್ದ ಈ ಜೋಡಿ
ಎಲ್ಲರಿಂದ ಪ್ರಶಂಸೆ ಗಳಿಸಿತ್ತು.

ಬಾಜಿರಾವ್ ಮಸ್ತಾನಿ ಚಿತ್ರದ ಪ್ರಣಯ ದೃಶ್ಯಗಳಲ್ಲಿ ಉತ್ತಮವಾಗಿ ಅಭಿನಯಿಸಿದ್ದೇವೆ. ನಮ್ಮಿಬ್ಬರ ಕೆಮಿಸ್ಟ್ರಿ ತುಂಬಾ ವಿಶೇಷವಾಗಿದೆ. ಆದರೆ ದೀಪಿಕಾ ಯೋಚನೆಯೇ ಬೇರೆ ಇದೆ ಎಂದು ರಣವೀರ್ ಸಿಂಗ್ ತಿಳಿಸಿದ್ದಾರೆ,

ನಾನು ಮತ್ತು ಅನುಷ್ಕಾ ಹಾಗೂ ದೀಪಿಕಾ ಮತ್ತು ರಣಬೀರ್ ಕಪೂರ್ ಜೋಡಿ ಚೆನ್ನಾಗಿರುತ್ತದೆ ಎಂಬುದು ದೀಪಿಕಾ ಅಭಿಪ್ರಾಯವಾಗಿದೆ. ಆದರೆ ದೀಪಿಕಾಳ ಈ ಯೋಚನೆಯನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

ಹೆಸರಾಂತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಬಾಜಿರಾವ್ ಮಸ್ತಾನಿ ಚಿತ್ರ ಮರಾಠ ಪೇಶ್ವೆ ಬಾಜಿ ರಾವ್ ಜೀವನದ ಕಥೆಯಾಧಾರಿತವಾಗಿದ್ದು, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.