ಬಾಲಿವುಡ್

ಕರಣ್ ಜೋಹರ್- ಶಾರೂಖ್ ಮತ್ತೆ ಜೊತೆಗೆ?

ಬಾಲಿವುಡ್ ನಲ್ಲಿ ಕರಣ್ ಜೋಹರ್ ಮತ್ತು ಶಾರೂಕ್ ಖಾನ್ ಜೋಡಿ ಜನಪ್ರಿಯ...

ಕರಣ್ ಜೋಹರ್- ಶಾರೂಖ್  ಮತ್ತೆ ಜೊತೆಗೆ?
ಕರಣ್-ಶಾರೂಕ್
Published On :

ಬಾಲಿವುಡ್ ನಲ್ಲಿ ಕರಣ್ ಜೋಹರ್ ಮತ್ತು ಶಾರೂಕ್ ಖಾನ್ ಜೋಡಿ ಜನಪ್ರಿಯ. ಇವರಿಬ್ಬರ ಸಿನಿಮಾ ಎಂದರೆ ಜನಕ್ಕೆ ಕುತೂಹಲ. ಇಬ್ಬರೂ ಜೊತೆಯಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದಾರೆ.

ಇವರಿಬ್ಬರ ಚಿತ್ರ 'ಮೈ ನೇಮ್ ಈಸ್ ಖಾನ್'  ಬಂದು ಐದು ವರ್ಷಗಳೇ ಆದವು. ನಂತರ ಇಬ್ಬರೂ ಒಟ್ಟಾಗಿರಲಿಲ್ಲ, ಇಬ್ಬರ ಮಧ್ಯೆ ಜಗಳವಾಗಿ ದೂರಾಗಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಆದರೆ ನಟಿಸಲು ಸರಿಯಾದ ಸ್ರ್ಕಿಪ್ಟ್ ಸಿಕ್ಕಿಲ್ಲ, ನಾವು ಚೆನ್ನಾಗಿದ್ದೇವೆ ಅಂತ ಸ್ವತಹ ಶಾರೂಖೇ ಸ್ಪಷ್ಟನೆ ನೀಡಿದರು.ನಂತರ ಎಲ್ಲವೂ ಸರಿ ಹೋಯಿತು.

ಇದೀಗ ಕಾಲ ಕೂಡಿ ಬಂದಿರುವ ಹಾಗಿದೆ. ಶಾರೂಕ್  ರಾಯೀಸ್ ಮತ್ತು ದಿಲ್ ವಾಲೆ ಚಿತ್ರಗಳ ನಂತರ ಕರಣ್ ಜೋಹರ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ. ಅಭಿಮಾನಿಗಳು ಖುಷಿಯಾಗಿದ್ದಾರೆ. ಇವರಿಬ್ಬರ ಜೊತೆ ಕಾಜೋಲ್ ಸೇರಿಕೊಂಡರೆ ಇನ್ನೂ ಚೆನ್ನಾರಿರುತ್ತದೆಯಲ್ಲವೇ ಅಂತ ಮಾತಾಡಿಕೊಳ್ತಿದ್ದಾರೇನೋ ಸಿನಿ ಪ್ರಿಯರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.