ಭಜರಂಗಿ ಭಾಯಿಜಾನ್ "ಟ್ರೈಲರ್" ಹಿಂದಿಕ್ಕಿದ "ಪೂನಂ ಯೋಗ" ವಿಡಿಯೋ
ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದು, ಇದೀಗ ಯೋಗ ದಿನಾಚರಣೆ ಪ್ರಯುಕ್ತ ತಮ್ಮದೇ ಯೋಗ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

Published On :
ನವದೆಹಲಿ: ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದು, ಇದೀಗ ಯೋಗ ದಿನಾಚರಣೆ ಪ್ರಯುಕ್ತ ತಮ್ಮದೇ ಯೋಗ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅತ್ತ ದೆಹಲಿಯಲ್ಲಿ ಯೋಗ ದಿನಾಚರಣೆ ನಡೆಯುತ್ತಿದ್ದರೆ, ಇತ್ತ ಯೂಟ್ಯೂಬ್ ನಲ್ಲಿ ಪ್ರತ್ಯಕ್ಷವಾಗಿದ್ದ ನಟಿ ಪೂನಂ ಪಾಂಡೆ ತಾನೂ ಸಹ ಉತ್ತಮ ಆರೋಗ್ಯಕ್ಕಾಗಿ ಯೋಗ ಕಲಿಸುತ್ತೇನೆ ಎಂದು ಹೇಳಿದ್ದರು. ಇದೀಗ ಈ ವಿಡಿಯೋ ದಾಖಲೆಯೊಂದನ್ನು ಬರೆದಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಭಜರಂಗಿ ಭಾಯಿಜಾನ್ ಚಿತ್ರ ಟ್ರೈಲರ್ ದಾಖಲೆಯನ್ನು ಹಿಂದಿಕ್ಕಿದೆ.
ಯೂಟ್ಯೂಬ್ ಗೆ ಅಪ್ಲೋಡ್ ಆದ ಮೂರೇ ದಿನಕ್ಕೆ ಈ ವಿಡಿಯೋವನ್ನು ಸುಮಾರು 24 ಲಕ್ಷ ಮಂದಿ ವೀಕ್ಷಿಸಿದ್ದು, ಭಜರಂಗಿ ಭಾಯಿ ಜಾನ್ ಚಿತ್ರದ ಟ್ರೈಲರ್ ಅನ್ನು ಮೊದಲ 3 ದಿನದಲ್ಲಿ ಸುಮಾರು 7 ಲಕ್ಷ ಮಂದಿ ವೀಕ್ಷಿಸಿದ್ದರು. 6 ದಿನದಲ್ಲಿ ಇದೇ ಟ್ರೈಲರ್ ಅನ್ನು 9.54 ಲಕ್ಷ ಮಂದಿ ವೀಕ್ಷಿಸಿದ್ದರು. ಸಲ್ಮಾನ್ ಖಾನ್ ರ ಭಜರಂಗಿ ಭಾಯಿ ಜಾನ್ ಟ್ರೈಲರ್ ಗಿಂತಲೂ ಪೂನಂಪಾಂಡೆ ಯೋಗ ವಿಡಿಯೋ 11 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಿಸಲ್ಪಟ್ಟಿದ್ದು, ಪ್ರಸ್ತುತ 24, 35, 890 ಮಂದಿ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿSalman Khanಸಲ್ಮಾನ್ ಖಾನ್New DelhiPoonam Pandeyಪೂನಂ ಪಾಂಡೆBajrangi Bhaijaanಭಜರಂಗಿ ಭಾಯಿಜಾನ್hot yogaಹಾಟ್ ಯೋಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


