ಬಾಲಿವುಡ್

ಕಂಗನಾ-ಇಮ್ರಾನ್ ಖಾನ್ ಅಭಿನಯದ ಕಟ್ಟಿ-ಬಟ್ಟಿ ಸಿನಿಮಾದ ಟ್ರೇಲರ್ ಬಿಡುಗಡೆ

ಕಂಗನಾ ರಣಾವತ್ ಅಭಿನಯದ ಹೊಸ ಚಿತ್ರ ಕಟ್ಟಿ-ಬಟ್ಟಿ ಟ್ರೇಲರ್ ಬಿಡುಗಡೆಯಾಗಿದೆ.

ಕಂಗನಾ-ಇಮ್ರಾನ್ ಖಾನ್ ಅಭಿನಯದ ಕಟ್ಟಿ-ಬಟ್ಟಿ ಸಿನಿಮಾದ ಟ್ರೇಲರ್ ಬಿಡುಗಡೆ
ಕಟ್ಟಿ-ಬಟ್ಟಿ ಚಿತ್ರದಲ್ಲಿ ಕಂಗನಾ ರಣಾವತ್ ಮತ್ತು ಇಮ್ರಾನ್ ಖಾನ್
Published On :

ತನ್ನ ಅತ್ಯದ್ಭುತ ನಟನಾ ಕೌಶಲ್ಯದಿಂದ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿರುವ ನಟಿ ಕಂಗನಾ ರಣಾವತ್ ಅಭಿನಯದ ಹೊಸ ಚಿತ್ರ ಕಟ್ಟಿ-ಬಟ್ಟಿ ಟ್ರೇಲರ್ ಬಿಡುಗಡೆಯಾಗಿದೆ.

ಕ್ವೀನ್, ತನು ವೆಡ್ಸ್ ಮನು ರಿಟರ್ನ್ಸ್ ನಂತರ ಕಟ್ಟಿ ಬಟ್ಟಿ ಚಿತ್ರದಲ್ಲಿ ಕಂಗನಾ, ಚಾಕೊಲೇಟ್ ಹೀರೋ ಎಂದೇ ಖ್ಯಾತಿ ಪಡೆದಿರುವ ಇಮ್ರಾನ್ ಖಾನ್ ಜೊತೆ ಅಭಿನಯಿಸಿದ್ದಾರೆ.
ಪ್ರೇಮಿಗಳಿಬ್ಬರು ಲಿವ್ - ಇನ್-ರಿಲೇಷನ್ ಶಿಪ್ ನಲ್ಲಿ ಜೊತೆಯಾಗಿ ಜೀವನ ಸಾಗಿಸುತ್ತಾರೆ. ತನಗೆ ಅನ್ನಿಸಿದ್ದನ್ನು ಯಾವ ಸಂಕೋಚವೂ ಇಲ್ಲದೇ ಅನ್ನಿಸಿದ್ದನ್ನು ಹೇಳುವ ನೇರ ನುಡಿಯ ವ್ಯಕ್ತಿತ್ವ ಕಂಗನಾದ್ದು. ಆದರೆ ಇಮ್ರಾನ್ ಖಾನ್ ನದ್ದು ತುಂಬಾ ಗಂಭೀರ ಸ್ವಭಾವ. ಕಂಗನಾ ಟೈಮ್ ಪಾಸ್ ಗಾಗಿ ಪ್ರೀತಿ ಮಾಡ್ತಾಳೆ. ಆದರೆ ಇಮ್ರಾನ್ ಖಾನ್ ಪ್ರೀತಿ ತುಂಬಾ ಗಂಭೀರವಾದ್ದು. ಅದನ್ನು ಉಳಿಸಿಕೊಳ್ಳಲು, ಅವಳಿಗೋಸ್ಕರ ಎಂಥ ರಿಸ್ಕ್ ತೆಗೆದುಕೊಳ್ಳಲು ತಯಾರಾಗಿರುತ್ತಾನೆ. ಇಂಥ ಕಥಾ ಹಂದರವನ್ನು ಇಟ್ಟುಕೊಂಡು ಚಿತ್ರವನ್ನು ತಯಾರಿಸಲಾಗುತ್ತಿದೆ.

5 ವರ್ಷಗಳ ಲಿವ್- ಇನ್-ರಿಲೇಷನ್ ಶಿಫ್ ಕಾಂಟ್ರ್ಯಾಕ್ಟ್ ಮೇರೆಗೆ ಜೊತೆಗಿರುತ್ತಾರೆ. ನಂತರ ಸಂಬಂಧ ಮುರಿದು ಬೀಳುತ್ತದೆ. ಇದಾದ ನಂತರ ಇಬ್ಬರಲ್ಲೂ ಪ್ರಬುದ್ಧತೆ ಬೆಳೆದು ಮತ್ತೆ ಒಟ್ಟಿಗೆ ಬಾಳಲು ಪ್ರಯತ್ನಿಸುತ್ತಾರೆ.

ಯುಟಿವಿ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ನಿಖಿಲ್ ಅದ್ವಾನಿ ಕಟ್ಟಿ- ಬಟ್ಟಿ, ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸೆಪ್ಟಂಬರ್ 18, 2015 ರಂದು ಚಿತ್ರ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.