ವೈದ್ಯರಿಗೆ ಕಪಾಳಮೋಕ್ಷ ಪ್ರಕರಣ: ಗಾಯಕ ಮಿಕಾ ಸಿಂಗ್ ಬಂಧನ, ಬಿಡುಗಡೆ
ಸಂಗೀತ ಸಮಾರಂಭದಲ್ಲಿ ವೈದ್ಯರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಖ್ಯಾತ ಹಿನ್ನಲೆಯ ಗಾಯಕ ಮಿಕಾ ಸಿಂಗ್ ಅವರನ್ನು ದೆಹಲಿ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ ಘಟನೆ ನಡೆದಿದೆ.

ನವದೆಹಲಿ: ಸಂಗೀತ ಸಮಾರಂಭದಲ್ಲಿ ವೈದ್ಯರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಖ್ಯಾತ ಹಿನ್ನಲೆಯ ಗಾಯಕ ಮಿಕಾ ಸಿಂಗ್ ಅವರನ್ನು ದೆಹಲಿ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ ಘಟನೆ ನಡೆದಿದೆ.
ಸಂಗೀತ ಕಾರ್ಯಕ್ರಮದಲ್ಲಿ ವೈದ್ಯರೊಬ್ಬರ ಕಪಾಳಕ್ಕೆ ಹೊಡೆದ ಆರೋಪ ಎದುರಿಸುತ್ತಿದ್ದ ಮಿಕಾ ಸಿಂಗ್ ಅವರನ್ನು ದೆಹಲಿಯ ಇಂಧ್ರಪುರಿ ಪೊಲೀಸರು ವಿಚಾರಣೆಗಾಗಿ ಇಂದು ಬರ ಹೇಳಿದ್ದರು. ಹುಟ್ಟಹಬ್ಬದ ಸಂಭ್ರಮದಲ್ಲಿದ್ದ ಮಿಕಾ ಸಿಂಗ್ ಅವರು ಕೂಡ ಕೇವಲ ವಿಚಾರಣೆ ಎಂದಷ್ಟೇ ಭಾವಿಸಿ ಠಾಣೆಗೆ ಹೋಗಿದ್ದರು. ಆದರೆ ಠಾಣೆಗೆ ಹೋದ ಮಿಕಾ ಸಿಂಗ್ ಅವರಿಗೆ ಪೊಲೀಸರು ದೊಡ್ಡ ಶಾಕ್ ಅನ್ನೇ ನೀಡಿದ್ದರು.
ಠಾಣೆಗೆ ಬಂದ ಮಿಕಾ ಸಿಂಗ್ ಅವರನ್ನು ಕೂಡಲೇ ಪೊಲೀಸರು ಬಂಧಿಸಿದರು. ಅಲ್ಲದೆ ಬಂಧಿತ ಮಿಕಾ ಸಿಂಗ್ ಅವರನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಲಯ ಮಿಕಾ ಸಿಂಗ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದೆ. 20 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಆಧಾರದ ಮೇಲೆ ಕೋರ್ಟ್ ಮಿಕಾ ಸಿಂಗ್ ಅವರಿಗೆ ಜಾಮೀನು ನೀಡಿ, ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ 2015ರ ಏಪ್ರಿಲ್ 12ರಂದು ದೆಹಲಿಯ ಇಂಧ್ರಪುರಿಯ ಪೂಸಾ ಇನ್ಸ್ಟಿಟ್ಯೂಟ್ ಮೇಳ ಮೈದಾನದಲ್ಲಿ ದೆಹಲಿ ನೇತ್ರ ಶಸ್ತ್ರಜ್ಞರ ಸಂಘದ ನೇರ ಪ್ರಸಾರದ ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಗಾಯಕ ಮಿಕಾ ಸಿಂಗ್ ವೈದ್ಯರನ್ನು ವೇದಿಕೆ ಮೇಲೆ ಆಗಮಿಸುವಂತೆ ಹೇಳಿದ್ದರು. ರಸಸಂಜೆ ಕಾರ್ಯಕ್ರಮ ನಡೆಯುವಾಗ ಪ್ರೇಕ್ಷಕರನ್ನು ವೇದಿಕೆ ಮೇಲೆ ಕರೆದು ಏನಾದ್ರೂ ಚಟುವಟಿಕೆ ಮಾಡಿಸುತ್ತಾರೆ ಎಂದು ಭಾವಿಸಿದ್ದ ವೈದ್ಯ ಶ್ರೀಕಾಂತ್ ಕೂಡಾ ಮಿಕಾ ಕರೆದಾಗ ಸ್ಟೇಜ್ ಹತ್ತಿದ್ದಾರೆ. ಅದರೆ, ಮಿಕಾ ಮಾತನಾಡುತ್ತಾ ತೆಗೆದು ಬಾರಿಸಿದ್ದಾರೆ. ನಂತರ ತನ್ನ ಬೌನ್ಸರ್ ಪಡೆಗೆ ಈತನನ್ನು ಹೊರಕ್ಕೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಈ ದೃಶ್ಯಾವಳಿಗಳು ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


