ಹಿಂದಿ 'ದೃಶ್ಯಂ' ಟ್ರೇಲರ್ ಗೆ ೧.೫ ಮಿಲಿಯನ್ ಹಿಟ್ಸ್
ಅಜಯ್ ದೇವಗನ್ ಅಭಿನಯದ 'ದೃಶ್ಯಂ' ಸಿನೆಮಾದ ಟ್ರೇಲರ್ ಅನ್ನು ಯೂಟ್ಯೂಬಿನಲ್ಲಿ ೧೬ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಈ ಸಿನೆಮಾ ಕೆರಳಿಸಿರುವ

ನವದೆಹಲಿ: ಅಜಯ್ ದೇವಗನ್ ಅಭಿನಯದ 'ದೃಶ್ಯಂ' ಸಿನೆಮಾದ ಟ್ರೇಲರ್ ಅನ್ನು ಯೂಟ್ಯೂಬಿನಲ್ಲಿ ೧೬ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಈ ಸಿನೆಮಾ ಕೆರಳಿಸಿರುವ ಕುತೂಹಲವನ್ನು ಇದು ತೋರಿಸುತ್ತದೆ. ಮಲಯಾಳಮ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಚಿತ್ರದ ಹಿಂದಿ ಅವತರಿಣಿಕೆ ಇದು.
ಜೂನ್ ೪ ರಂದು ಬಿಡುಗಡೆಯಾದ ಸಿನೆಮಾದ ಮೊದಲ ನೋಟ ಜನರನ್ನು ತುದಿಗಾಲ ಮೇಲೆ ನಿಲ್ಲಿಸಿ ಸಿನೆಮಾ ಬಿಡುಗಡೆಗೆ ಕಾಯುವಂತೆ ಮಾಡಿದೆ.
ದೃಶ್ಯಂ ಮಲಯಾಳಮ್ ಸಿನೆಮಾ ಈಗಾಗಲೇ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಿಮೇಕ್ ಮಾಡಲಾಗಿದೆ. ಹಿಂದಿ ಅವತರಿಣಿಕೆಯಲ್ಲಿ ಟಬು ಪೊಲೀಸ್ ಅಧಿಕಾರಿ ಪಾತ್ರ ವಹಿಸಿದ್ದಾರೆ.
ನಿಶಾಂತ್ ಕಾಮತ್ ನಿರ್ದೇಶಿಸಿರುವ ಈ ಸಿನೆಮಾ ಜುಲೈ ೩೧ಕ್ಕೆ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


