ಬಾಲಿವುಡ್

ದಶಕದ ನಂತರ ಬಾಲಿವುಡ್ ನಲ್ಲಿ ನಟಿಸಿ ಚಿತ್ರ ನಿರ್ದೇಶಿಸಲಿರುವ ಕಮಲ್

ಹಲವಾರು ವಿವಾದಗಳ ನಂತರ ಕಮಲ್ ಹಾಸನ್ ಅವರ 'ಉತ್ತಮ ವಿಲನ್' ಬಿಡುಗಡೆಯಾಗಿ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಈಗ ಹಿಂದಿ ಸಿನಿಮೋದ್ಯಮಕ್ಕೆ ಹಿಂದಿರುಗಲು ಕಮಲ್

ದಶಕದ ನಂತರ ಬಾಲಿವುಡ್ ನಲ್ಲಿ ನಟಿಸಿ ಚಿತ್ರ ನಿರ್ದೇಶಿಸಲಿರುವ ಕಮಲ್
ಕಮಲ್ ಹಾಸನ್
Published On :

ಹಲವಾರು ವಿವಾದಗಳ ನಂತರ ಕಮಲ್ ಹಾಸನ್ ಅವರ 'ಉತ್ತಮ ವಿಲನ್' ಬಿಡುಗಡೆಯಾಗಿ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಈಗ ಹಿಂದಿ ಸಿನಿಮೋದ್ಯಮಕ್ಕೆ ಹಿಂದಿರುಗಲು ಕಮಲ್ ಹಾಸನ್ ಸಿದ್ಧರಾಗಿದ್ದಾರೆ. ಈ ಸಿನೆಮಾವನ್ನಿ ನಟಿಸಿ ನಿರ್ದೇಶಿಸಲಿದ್ದಾರೆ ಕೂಡ. 'ಅಮರ್ ಹೈ' ಎಂಬ ಶೀರ್ಷಿಕೆಯ ಈ ಸಿನೆಮಾದಲ್ಲಿ ಕಮಲ್ ಜೊತೆ ಸೈಫ್ ಅಲಿ ಖಾನ್ ಕೂಡ ನಟಿಸಲಿದ್ದಾರೆ.

ಈ ಸ್ಕ್ಪ್ರಿಟ್ ಸಿದ್ಧಪಡಿಸಲು ಕಮಲ್ ಆರು ವರ್ಷಗಳ ಕಾಲ ದುಡಿದಿದ್ದಾರೆ ಎಂದು ತಿಳಿದುಬಂದಿದೆ "ಇದು ಭಾವನೆಗಳನ್ನು ಹೊಂದಲಾದ ಆಕ್ಷನ್ ಸಿನೆಮಾ" ಎಂದು ತಿಳಿದುಬಂದಿದೆ.

ಮುಂಬೈ ಮಿರರ್ ವರದಿಯ ಪ್ರಕಾರ "ಹಲವು ನಟರ ಶಕ್ತಿ ಸಿನೆಮಾವನ್ನು ಗೆಲ್ಲಿಸುತ್ತದೆ. ಸೈಫ್ ಅವರಿಗೆ ಪ್ರಮುಖವಾದ ಹಾಗೂ ಸಮನಾದ ಪಾತ್ರವಿದೆ. ಅವರದ್ದು ಒಳ್ಳೆಯ ಮನುಷ್ಯನ ಪಾತ್ರ ಆದುದರಿಂದ ಅವರೇ ಹೀರೋ" ಎಂದು ೬೦ ವರ್ಷದ ಹಿರಿಯ ನಟ ಕಮಲ್ ತಿಳಿಸಿದ್ದಾರೆ.

ರಾಜಕೀಯ, ಹಣಕಾಸು ಮತ್ತು ಭೂಗತ ಲೋಕ ದ ವಿಷಯಗಳಿರುವ ಈಸಿನೆಮಾವನ್ನು ಮುಂಬೈ, ದೆಹಲಿ, ಲಂಡನ್, ದುಬೈ, ಜಾರ್ಡನ್ ಮತ್ತು ಅಮೇರಿಕಾದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ೨೦೦೫ರ 'ಮುಂಬೈ ಎಕ್ಸ್ಪ್ರೆಸ್' ನಂತರ ಇದು ಮೊದಲ ಹಿಂದಿ ಸಿನೆಮಾ ಕಮಲ್ ಅವರಿಗೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.