ಬಾಲಿವುಡ್

ಅಥಿಯಾಳ ಮುಂದಿದೆ ಸವಾಲು

ಬಾಲಿವುಡ್‍ನ ಅಂಗಳದಲ್ಲರೇ ಆಡಿ ನಲಿದ ಅಥಿಯಾಳಿಗೆ ಸಿನೆಮಾ ಜಗತ್ತು ಹೊಸದಲ್ಲ. ಈಕೆ ಖ್ಯಾತ ನಟ ಸುನಿಲ್ ಶೆಟ್ಟಿಯ ಪುತ್ರಿ...

ಅಥಿಯಾಳ ಮುಂದಿದೆ ಸವಾಲು
ಅಥಿಯಾ ಶೆಟ್ಟಿ
Published On :

ಬಾಲಿವುಡ್‍ನ ಅಂಗಳದಲ್ಲರೇ ಆಡಿ ನಲಿದ ಅಥಿಯಾಳಿಗೆ ಸಿನೆಮಾ ಜಗತ್ತು ಹೊಸದಲ್ಲ. ಈಕೆ ಖ್ಯಾತ ನಟ ಸುನಿಲ್ ಶೆಟ್ಟಿಯ ಪುತ್ರಿ.

ಬಾಲ್ಯದಿಂದಲೇ ಅಭಿನಯದ ಆಸಕ್ತಿ ಹೊಂದಿದ್ದ ಅಥಿಯಾಳನ್ನು ತಂದೆ ತಾಯಿ ಪ್ರೋತ್ಸಾಹಿಸಿದರು. ಭವಿಷ್ಯವನ್ನು ಇಲ್ಲೇ ಕಂಡು ಕೊಳ್ಳುವುದು ಎಂದು ಅಥಿಯಾ ನಿರ್ಧರಿಸಿಯಾಗಿದೆ. ನ್ಯೂಯಾರ್ಕಿನಲ್ಲಿ ಎರಡು ವರ್ಷದ ಆ್ಯಕ್ಟಿಂಗ್ ಕೋರ್ಸ್ ಮಾಡಿದ್ದಾಳೆ. ಹೀಗೆ ಎಲ್ಲ ತಯಾರಿ ಮಾಡಿಕೊಂಡೇ ಬಣ್ಣ ಹಚ್ಚಿರುವ ಅಥಿಯಾಳ ಮೊದಲ ಚಿತ್ರ ಹೀರೊ.

ಅವಳ ಎದುರು ನಾಯಕನಾಗಿ ನಟಿಸುತ್ತಿರುವವನು ಕೂಡ ಹೊಸಬನೇ. ಈತ ಇನ್ನೋರ್ವ ತಾರಾ ಪುತ್ರ ಸೂರಜ್ ಪಾಂಚೋಲಿ. ಅಂದ ಹಾಗೇ ಹೀರೊ 1983ರಲ್ಲಿ ಬಂದ ಸೂಪರ್ ಹಿಟ್ ಚಿತ್ರ ಹೀರೊದ ರೀಮೇಕ್. ಕತೆ ಮತ್ತು ಹೆಸರು ಎರಡೂ ಹಳೆಯದು. ಮೀನಾಕ್ಷಿ ಶೇಷಾದ್ರಿ ನಿರ್ವಹಿಸಿದ ಪಾತ್ರದಲ್ಲೀಗ ಅಥಿಯಾ ನಟಿಸುತ್ತಿದ್ದಾಳೆ.

ಸಹಜವಾಗಿಯೇ ಇದು ತುಸು ಕಷ್ಟದ ಕೆಲಸ. ಹೇಗೆ ನಟಿಸಿದರೂ ಪ್ರೇಕ್ಷಕರು ಮೀನಾಕ್ಷಿಯೊಂದಿಗೆ ತುಲನೆ ಮಾಡಿಯೇ ಮಾಡುತ್ತಾರೆ. ಹೀಗಾಗಿ ಮೀನಾಕ್ಷಿ ಶೇಷಾದ್ರಿಯನ್ನು ಮೀರಿಸುವ ಸವಾಲು ಅಥಿಯಾಳ ಮೇಲಿದೆ. ನಿಜವಾದ ಫಲಿತಾಂಶ ಸಿಗುವುದು ಸಪ್ಟೆಂಬರ್‍ನಲ್ಲಿ. ಆಲ್ ದಿ ಬೆಸ್ಟ್ ಅಥಿಯಾ

‘Hero’ remake starring Suraj Pancholi and Athiya Shetty - See more at: http://indianexpress.com/article/entertainment/bollywood/hero-remake-starring-suraj-pancholi-to-release-on-july-3-2015/#sthash.1aoO6bhQ.dpuf

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.