ಬಾಲಿವುಡ್

ಪಿಕೆ ಚಿತ್ರದ ದಾಖಲೆ ಮುರಿದ ಭಾಯಿಜಾನ್

ಬಿಡುಗಡೆಯಾದ ಮೂರೇ ದಿನಗಳಲ್ಲಿ ಸಲ್ಮಾನ್ ಖಾನ್ ನಟಿಸಿದ ಬಜರಂಗಿ ಭಾಯಿಜಾನ್ ಚಿತ್ರ 100 ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ...

ಪಿಕೆ ಚಿತ್ರದ ದಾಖಲೆ ಮುರಿದ ಭಾಯಿಜಾನ್
ಬಜರಂಗಿ ಭಾಯಿಜಾನ್
Published On :

ಮುಂಬೈ: ಬಿಡುಗಡೆಯಾದ ಮೂರೇ ದಿನಗಳಲ್ಲಿ ಸಲ್ಮಾನ್ ಖಾನ್ ನಟಿಸಿದ ಬಜರಂಗಿ ಭಾಯಿಜಾನ್ ಚಿತ್ರ 100 ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ. ಜುಲೈ 17ರಂದು ಈದ್ ಹಬ್ಬಕ್ಕೆ ಬಿಡುಗಡೆಯಾದ ಬಜರಂಗಿ ಭಾಯಿಜಾನ್ ಇದೀಗ ಅಮೀರ್ ಖಾನ್ ನಟಿಸಿದ ಪಿಕೆ ಚಿತ್ರವನ್ನು ಹಿಂದಿಕ್ಕಿ ದಾಖಲೆ ಬರೆದಿದೆ.

ಇತ್ತ ಬಹುಭಾಷಾ ಚಿತ್ರವಾದ ಬಾಹುಬಲಿ 300 ಕೋಟಿ ಬಾಚಿಕೊಂಡು ದಾಖಲೆ ಸೃಷ್ಟಿಸಿ ಬಾಲಿವುಡ್‌ಗೇ ಸೆಡ್ಡು ಹೊಡೆದಿದೆ. ಅದೇ ವೇಳೆ ಒಂದು ವಾರಕ್ಕಿಂತ ಮುಂಚೆಯೇ 100 ಕೋಟಿ ಕ್ಲಬ್‌ಗೆ ಸೇರಿರುವ ಬಜರಂಗಿ ಭಾಯಿಜಾನ್ ದೇಶ ವಿದೇಶಗಳಲ್ಲಿ ತನ್ನ ಅಲೆ ಮುಂದುವರಿಸಿದೆ.

2014ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ರ ಕಿಕ್ ಚಿತ್ರ 231. 86 ಕೋಟಿ ಗಳಿಸಿ ದಾಖಲೆ ಬರೆದಿದ್ದು, ಅದನ್ನು ಬಜರಂಗಿ ಭಾಯಿಜಾನ್ ಮೀರಿಸುವ ಸಾಧ್ಯತೆಗಳು  ಕಂಡುಬರುತ್ತಿವೆ.

ಪ್ರಸಕ್ತ ವರ್ಷದಲ್ಲಿ ಬಿಡುಗಡೆಯಾದ ತನು ವೆಡ್ಸ್ ಮನು ರಿಟರ್ನ್ಸ್ ಮತ್ತು ಎಬಿಸಿಡಿ 2 ಚಿತ್ರಗಳನ್ನು ಹಿಂದಿಕ್ಕಿ ಬಜರಂಗಿ ಭಾಯಿಜಾನ್ ಈ ವರ್ಷದ ಸೂಪರ್ ಹಿಟ್ ಚಿತ್ರವೆನಿಸಿಕೊಳ್ಳಲಿದೆ ಎಂದು ಬಾಲಿವುಡ್ ಮೂಲಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.