ಬಾಲಿವುಡ್

೩೩ ತುಂಬಿದ ಪ್ರಿಯಾಂಕ; ತಾಯಿಯಿಂದ ಅಚ್ಚರಿ ಔತಣ

ನಿವಾರಕ್ಕೆ ೩೩ ವಸಂತಗಳನ್ನು ಪೂರೈಸಿದ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾಳಿಗೆ ಆಶ್ಚರ್ಯ ಕಾದಿತ್ತು. ಅವರ ತಾಯಿ ಮಗಳಿಗಾಗಿ ಅಚ್ಚರಿ ಔತಣವೊಂದನ್ನು

೩೩ ತುಂಬಿದ ಪ್ರಿಯಾಂಕ; ತಾಯಿಯಿಂದ ಅಚ್ಚರಿ ಔತಣ
ಔತಣಕೂಟದ ಫೋಟೋ ಟ್ವೀಟ್ ಮಾಡಿದ ಪರಿಣಿತಿ ಛೋಪ್ರಾ
Published On :

ಮುಂಬೈ: ಶನಿವಾರಕ್ಕೆ ೩೩ ವಸಂತಗಳನ್ನು ಪೂರೈಸಿದ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾಳಿಗೆ ಆಶ್ಚರ್ಯ ಕಾದಿತ್ತು. ಅವರ ತಾಯಿ ಮಧು ಮಗಳಿಗಾಗಿ ಅಚ್ಚರಿ ಔತಣವೊಂದನ್ನು ಆಯೋಜಿಸಿದ್ದರು. ಇದರಿಂದ ಆಶ್ಚರ್ಯಚಕಿತಳಾದೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾರೆ.

"ನಾನು 'ಬಾಜಿರಾವ್ ಮಸ್ತಾನಿ' ಚಿತ್ರೀಕರಣದಲ್ಲಿ ನಿರತಳಾಗಿದ್ದೆ, ಮತ್ತು ನಮ್ಮಮ್ಮ ಆಯೋಜಿಸಿರುವ ಯಾವುದೇ ಔತಣಕೂಟದ ಬಗ್ಗೆ ನನಗೆ ಸುಳಿವಿರಲಿಲ್ಲ. ನನ್ನೆಲ್ಲಾ ಗೆಳೆಯ ಗೆಳತಿಯರು ಬಂದಿದ್ದರು ನನಗೆ ಆಶ್ಚರ್ಯವಾಯಿತು. ನನಗೆ ಅತೀವ ಸಂತಸವಾಗುತ್ತಿದೆ ಮತ್ತು ನನ್ನೆಲ್ಲಾ ಗೆಳೆಯರಿಗೆ ಧನ್ಯವಾದಗಳು" ಎಂದು ಪ್ರಿಯಾಂಕ ಹೇಳಿದ್ದಾರೆ.

ನಟಿ ಪ್ರಿಯಾಂಕ ಈಗ 'ಗಂಗಾಜಲ್-೨', 'ಬಾಜಿರಾವ್ ಮಸ್ತಾನಿ' ಮತ್ತು ಅಮೇರಿಕದ ಧಾರಾವಾಹಿ 'ಕ್ವಾಂಟಿಕೋ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಅಲ್ಲದೆ ಅವರು ಹೊಸ ಮನೆಗೆ ಕೂಡ ತೆರಳುತ್ತಿದ್ದಾರೆ. "ನಾವು ಮನೆ ಬದಲಿಸುತ್ತಿದ್ದೇವೆ ಆದರೆ ಅದು 'ಕ್ವಾಂಟಿಕೋ' ಚಿತ್ರೀಕರಣದ ನಂತರ" ಎಂದು ರಾಷ್ಟ್ರೀಯ ಪ್ರಶಸ್ತಿ ವಿಜೇತೆ ತಿಳಿಸಿದ್ದಾರೆ.

ಆಹ್ವಾನಿತರಿಗಷ್ಟೇ ಆಹ್ವಾನವಿದ್ದ ಈ ಔತಣಕೂತಕ್ಕೆ ಬಂದಿದ್ದ ಅವರ ದಾಯಾದಿ ಸಹೋದರಿ ಪರಿಣಿತಿ ಛೋಪ್ರಾ ಫೋಟೋ ಟ್ವೀಟ್ ಮಾಡಿ, ಔತಣಕೂಟವನ್ನು ಪ್ರಶಂಸಿಸಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ, ವಿಶಾಲ್ ಭಾರದ್ವಾಜ್, ವಿಕಾಸ್ ಭಾಲ್, ರಿತೇಶ್ ದೇಶಮುಖ್, ಜೆನೆಲಿಯ ಡಿಸೋಜಾ, ಕಂಗನ ರನೌತ್, ರಣವೀರ್ ಸಿಂಗ್, ಅನುರಾಗ್ ಕಶ್ಯಪ್, ಕ್ರಿಶಿಕಾ ಲುಲ್ಲ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.