'ಈದ್' ಸಂಭ್ರಮದಲ್ಲಿ ಬಜರಂಗಿ ವೀಕ್ಷಿಸಲಿರುವ ಆಮೀರ್ ಖಾನ್
ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ ಈದ್ ಮಿಲಾದ್ ಎಂದರೆ ಕುಟುಂಬದವರೊಡನೆ ಕಳೆಯುವ ಸಂತಸದ ಕ್ಷಣವಂತೆ. ಹಾಗಂತ ಸ್ವತಹ ಆಮೀರ್ ಖಾನೇ ಹೇಳಿದ್ದಾರೆ...

ನವದೆಹಲಿ: ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ ಈದ್ ಮಿಲಾದ್ ಎಂದರೆ ಕುಟುಂಬದವರೊಡನೆ ಕಳೆಯುವ ಸಂತಸದ ಕ್ಷಣವಂತೆ. ಹಾಗಂತ ಸ್ವತಹ ಆಮೀರ್ ಖಾನೇ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆಮೀರ್ ಖಾನ್, ಈದ್ ಅಂದರೆ ನನಗೆ ತುಂಬಾ ಹತ್ತಿರವಾದವರ ಜತೆ ಸಂತೋಷದಿಂದ ಕಳೆಯಲು ಇರುವ ಸಮಯ ಎಂದು ಹೇಳಿದ್ದಾರೆ. ಹಬ್ಬದ ಸಡಗರದ ಜತೆ ಅವರು ಸಲ್ಮಾನ್ ಖಾನ್ ನ ಬಜರಂಗಿ ಬಾಯಿಜಾನ್ ಸಿನೆಮಾವನ್ನು ಕೂಡ ವೀಕ್ಷಿಸಲಿದ್ದಾರಂತೆ.
ಸಲ್ಮಾನ್ ಖಾನ್ ನ ಬಜರಂಗಿ ಬಾಯಿಜಾನ್ ಚಿತ್ರ ನಿನ್ನೆ(ಶುಕ್ರವಾರ) ತೆರೆಕಂಡಿದ್ದು, ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಈ ಚಿತ್ರದ ಫಸ್ಟ್ ಲುಕ್ ನ್ನು ಮೊದಲು ಶಾರೂಕ್ ಖಾನ್, ಆಮೇಲೆ ಆಮೀರ್ ಖಾನ್ ಬಿಡುಗಡೆಗೊಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


