ಪ್ರತಿ ಚಿತ್ರದೊಂದಿಗೆ ಹಿಂದಿನ ದಾಖಲೆ ಮುರಿಯುವಾಸೆ: ಸಲ್ಮಾನ್
ತಮ್ಮ ಪ್ರತಿ ಸಿನೆಮಾದ ಬಿಡುಗಡೆಯ ನಂತರ, ಹಿಂದಿನ ದಾಖಲೆಗಳನ್ನು ಮುರಿದು ನೂತನ ಯಶೋಗಾಥೆ ಬರೆಯುವಾಸೆಯಿದೆ ಎಂದಿದ್ದಾರೆ ಬಾಲಿವುಡ್ ಸೂಪರ್

ನವದೆಹಲಿ: ತಮ್ಮ ಪ್ರತಿ ಸಿನೆಮಾದ ಬಿಡುಗಡೆಯ ನಂತರ, ಹಿಂದಿನ ದಾಖಲೆಗಳನ್ನು ಮುರಿದು ನೂತನ ಯಶೋಗಾಥೆ ಬರೆಯುವಾಸೆಯಿದೆ ಎಂದಿದ್ದಾರೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್.
'ದಭಾಂಗ್' ಮತ್ತು 'ಏಕ್ ಥಾ ಟೈಗರ್' ಗಳಂತಹ ಹಿಟ್ ಸಿನೆಮಾಗಳನ್ನು ನೀಡಿದ ನಟ 'ಯಾರೂ ಫ್ಲಾಪ್ ಸಿನೆಮಾಗಳನ್ನು ಮಾಡಲು ಇಚ್ಚಿಸುವುದಿಲ್ಲ' ಎಂದು ಕೂಡ ಹೇಳಿದ್ದಾರೆ.
ಬಿಡುಗಡೆಗೆ ಮುಂಚಿತವಾಗಿಯೇ ಸಲ್ಮಾನ್ ಅವರ ಮುಂದಿನ ಚಲನಚಿತ್ರ 'ಭಜರಂಗಿ ಬಾಯಿಜಾನ್' ಈ ವರ್ಷದ ಅತಿ ದೊಡ್ಡ ಹಿಟ್ ಚಿತ್ರವಾಗಲಿದೆ ಎಂದು ಬಣ್ಣಿಸಲಾಗುತ್ತಿದೆ.
"ಮುಂದಿನ ಯೋಜನೆಯೊಂದಿಗ ನಮ್ಮ ಹಿಂದಿನ ದಾಖಲೆಗಳನ್ನು ಮುರಿಯಲು ಶ್ರಮಿಸುತ್ತೇವೆ. 'ಕಿಕ್' ಹಲವಾರು ದಾಖಲೆಗಳನ್ನು ಮುರಿಯಿತು ಆದುದರಿಂದ ಈಗ ಫ್ಲಾಪ್ ಸಿನೆಮಾವೊಂದನ್ನು ಮಾಡೋಣ ಎಂಬ ಚಿಂತನೆಯಿಂದ ನಾವು ಸಿನೆಮಾ ಮಾಡುವುದಿಲ್ಲ. ಹಿಂದಿನ ದಾಖಲೆಗಳನ್ನು ಮುರಿಯುವುದೇ ನಮ್ಮ ಬಯಕೆಯಾಗಿರುತ್ತದೆ" ಎಂದು ೨೦೧೪ ರಲ್ಲಿ ಹಿಟ್ ಸಿನೆಮಾ 'ಕಿಕ್' ನೀಡಿದ ನೆನಪಿನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ತಮ್ಮ ಮುಂದಿನ ಸಿನೆಮ 'ಭಜರಂಗಿ ಭಾಯಿಜಾನ್' ಪ್ರಚಾರಕ್ಕೆ ಮಂಗಳವಾರ ರಾಜಧಾನಿಗೆ ಬಂದಿದ್ದ ೪೯ ವರ್ಷದ ನಟ ಸಲ್ಮಾನ್ ಖಾನ್, ನಿರ್ದೇಶಕ ಕಬೀರ್ ಖಾನ್, ನಟಿ ಕರೀನಾ ಕಪೂರ್, ನಟ ನವಾಜುದ್ದೀನ್ ಸಿದ್ಧಿಕಿ, ಗಾಯಕರಾದ ಮಿಕಾ ಸಿಂಗ್, ಅದ್ನಾನ್ ಸಾಮಿ, ಜುಬಿನ್ ನೌಟಿಯಾಲ್ ಮತ್ತು ಸಲ್ಮಾನ್ ಖಾನ್ ಫಿಲಂಸ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಮರ್ ಭೂತಾಲ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಈ ಶುಕ್ರವಾರ ಸಿನೆಮಾ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


