ಶಮಿತಾಭ್ ತಂಡದ ಫ್ಲೈ ವಿಥ್ ವಿಐಪಿ ಸ್ಪರ್ಧೆ
ಬಿಡುಗಡೆಗೆ ಸಿದ್ಧವಾಗಿರುವ ಬಾಲಿವುಡ್‍ನ ಬಹುನಿರೀಕ್ಷಿತ ಚಿತ್ರ `ಬಿಗ್ ಬಿ' ಅಭಿನಯದ `ಶಮಿತಾಭ್'ನ ಪ್ರಚಾರ ಕಾರ್ಯ ಬಿರುಸುಗೊಂಡಿದ್ದು...

ಬೆಂಗಳೂರು: ಬಿಡುಗಡೆಗೆ ಸಿದ್ಧವಾಗಿರುವ ಬಾಲಿವುಡ್‍ನ ಬಹುನಿರೀಕ್ಷಿತ ಚಿತ್ರ `ಬಿಗ್ ಬಿ' ಅಭಿನಯದ `ಶಮಿತಾಭ್'ನ ಪ್ರಚಾರ ಕಾರ್ಯ ಬಿರುಸುಗೊಂಡಿದ್ದು, ಸಿನಿಪ್ರಿಯರಿಗೊಂದು ವಿಶಿಷ್ಟ ಆಫರ್ ನೀಡಿದೆ. ಫ್ಲೈ ವಿಥ್ ವಿಐಪಿ' ಎಂಬ ಈ ಕೊಡುಗೆಯಲ್ಲಿ ಚಿತ್ರ ತಂಡದ ನಿಬಂಧನೆಗಳ ಅಡಿಯಲ್ಲಿ ವಿಶೇಷ ಆಟವೊಂದನ್ನು ಆಡಿಸಲಾಗುವುದು
ವುದು. ಗೆದ್ದರೆ ಸೆಲೆಬ್ರಿಟಿಗಳಿಗೆಂದೇ ಮೀಸಲಿರುವ ವಿಶೇಷ ಜೆಟ್ ವಿಮಾನದಲ್ಲಿ ಪಯಣಿಸುವ ಅವಕಾಶವೊಂದು ನಿಮ್ಮದಾಗಲಿದೆ. ಅಮಿತಾಭ್, ಧನುಷ್, ಅಕ್ಷರಾ ಹಾಸನ್ ಮತ್ತು ಆರ್.ಬಾಲ್ಕಿ ಯವರೊಂದಿಗೆ ಖಾಸಗಿ ಜೆಟ್‍ನಲ್ಲಿ ಕುಳಿತು, ಸಂವಾದಿಸುತ್ತ ಸಂಚರಿಸಬಹುದಾದ ಅವಕಾಶವಿದು.
ಇಲ್ಲಿ ಒಟ್ಟು ಎರಡು ರೀತಿಯ ಸ್ಪರ್ಧೆಗಳಿದ್ದು, ಒಂದು ಸ್ಪರ್ಧೆಯಲ್ಲಿ ಸೆಲೆಬ್ರಿಟಿ ಪಕ್ಕದ ಆಸನವನ್ನು ಹರಾಜು ಪ್ರಕ್ರಿಯೆ ಮೂಲಕ ಗೆದ್ದುಕೊಳ್ಳಬಹುದು.ಮತ್ತೊಂದು ಲಕ್ಕಿ ಡ್ರಾ ಮೂಲಕ ಗೆಲ್ಲುವ ಅವಕಾಶ ಸಿಗಲಿದೆ. ಅಲ್ಲದೇ ಮುಂಗಡ ಬುಕಿಂಗ್ ಮೂಲಕವೂ ಸೀಟು ಕಾಯ್ದಿರಿಸಬಹುದು. ಆದರೆನಿಮ್ಮ ಪಕ್ಕದ ಸೀಟಿನಲ್ಲಿ ಸೆಲೆಬ್ರಿಟಿಗಳು ಕೂರುವ ಸಾಧ್ಯತೆ ಅದೃಷ್ಟಕ್ಕೆ ಬಿಟ್ಟದ್ದಾಗಿರುತ್ತದೆ. ಇದು ಸಿನಿಮಾ ಪ್ರಚಾರಕ್ಕಾಗಿಯೇ ಆರಂಬಿsಸಿರುವ ಸ್ಪರ್ಧೆಯಾದರೂ, `ಶಮಿತಾಭ್' ತಂಡ ಇದರಿಂದ ಬರುವ ಹಣದಲ್ಲಿ ಶೇ.85ರಷ್ಟನ್ನು ದಾನಧರ್ಮಕ್ಕಾಗಿ ಬಳಸುವ ಉದ್ದೇಶ ಹೊಂದಿದೆ. ಆದ್ದರಿಂದ ಈ ಆಟದಲ್ಲಿ ಸಿನಿಮಾ, ಕ್ರಿಕೆಟ್, ರಾಜಕಾರಣಿಗಳೂ ಭಾಗವಹಿಸಲು ಸಮ್ಮತಿಸಿದ್ದಾರೆ.ಅಮಿತಾಭ್ ಬಚ್ಚನ್ ಜೊತೆಯಲ್ಲಿ ಅಭಿಷೇಕ್ ಬಚ್ಚನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮಹೇಂದ್ರಸಿಂಗ್ ಧೋನಿ, ಸೈನಾ ನೆಹ್ವಾಲ್ ,ಫರ್ಹಾ ಖಾನ್, ಮನಿಷ್ ಮಲ್ಹೋತ್ರಾ, ರಾಹುಲ್ ಬಜಾಜ್ ಮುಂತಾದವರು ಈ ಸ್ಪರ್ಧೆಯ ಸೆಲೆಬ್ರಿಟಿಗಳಾಗಿ ಭಾಗವಹಿಸಲಿದ್ದಾರೆ. ಈ ಯೋಜನೆಗೆ ಇನ್ಫೋಸಿಸ್ ನಿರ್ದೇಶಕ ಟಿ.ವಿ ಮೋಹನದಾಸ್ ಪೈ ಸೇರಿದಂತೆ ಹಲವರು ಬೆಂಬಲಿಸಿದ್ದು, ಈ ಯೋಜನೆಗೆ ಪೇಟೆಂಟ್ ಅನ್ನೂ ಪಡೆಯಲಾಗಿದೆ.
ನ್ಯಾಯಯುತವಾಗಿ ಸ್ಪರ್ಧೆ ನಡೆಯುವ ಸಲುವಾಗಿ ಬುಕ್ಕಿಗಳು, ದಲ್ಲಾಳಿಗಳು ಪ್ರವೇಶಿಸದ ಹಾಗೆ ಭದ್ರತೆ ವಹಿಸಲಾಗುತ್ತಿದೆ. ಕನ್ನಡ ಚಿತ್ರರಂಗದ ತಾರೆಗಳೂ ಇದರಲ್ಲಿ ಭಾಗವಹಿಸಲು ಒಪ್ಪಿದ್ದು, ಶೀಘ್ರದಲ್ಲಿಯೇ ಅವರ ಹೆಸರುಗಳನ್ನಿನ್ನೂ ಬಹಿರಂಗಗೊಳಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


