ಬಯಲಾಗಲಿರುವ ರಹಸ್ಯ!!
ಟಿಸ್ಕಾ ಚೋಪ್ರಾಳ ರಹಸ್ಯ ಇನ್ನೇನು ಬಯಲಾಗಲಿದೆ ಅಂತ ಹೇಳಿದ್ರೆ ರಹಸ್ಯ...

ಟಿಸ್ಕಾ ಚೋಪ್ರಾಳ ರಹಸ್ಯ ಇನ್ನೇನು ಬಯಲಾಗಲಿದೆ ಅಂತ ಹೇಳಿದ್ರೆ ರಹಸ್ಯ ಏನು ಅಂತ ಕೇಳೋದಕ್ಕಿಂತ ಹೆಚ್ಚು ಮಂದಿ ಟಿಸ್ಕಾ ಚೋಪ್ರಾ ಯಾರು ಅಂತ ಕೇಳ್ತಾರೆ.
ಟಿಸ್ಕಾ ಚೋಪ್ರಾ ಹಿಂದಿ ಟಿವಿ ಧಾರಾವಾಹಿ ನೋಡೋವ್ರಿಗೆ ಬಹುಪರಿಚಿತ ಮುಖ. ಸಿನಿಮಾ ವೀಕ್ಷಕರಿಗೆ ಪರಿಚಯಿಸೋದಾದ್ರೆ ತಾರೇ ಜಮೀನ್ ಪರ್ ಚಿತ್ರದಲ್ಲಿ ಆಮಿರ್ ಖಾನ್ ಜೊತೆಗೆ ನಟಿಸಿದ್ದ ನಟಿ ಅಂತ ಹೇಳಿ ನೆನಪಿಸಬೇಕು.ಇಪ್ಪತ್ತು ವರ್ಷದ ಹಿಂದೆ ಅಜಯ್ ದೇವಗನ್ ಜೊತೆ ಹೀರೋಯಿನ್ನಾಗಿ ಪ್ಲಾಟ್‌ಫಾರ್ಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಟಿಸ್ಕಾಗೆ ಆಮೇಲೆ ಬೆಳ್ಳಿತೆರೆ ಅಷ್ಟೊಂದು ಆಗಿಬರಲಿಲ್ಲ. ಕಹಾನಿ ಘರ್ ಘರ್‌ಕಿ, ಅಸ್ತಿತ್ವ ಮುಂತಾದ ಧಾರಾವಾಹಿಗಳಿಂದ ಕಿರುತೆರೆಯ ಸ್ಟಾರ್ ಆದ ಟಿಸ್ಕಾ ಅರೋರಾ, ನಂತರದಲ್ಲಿ ಚೋಪ್ರಾ ಎಂಬ ಸರ್‌ನೇಮ್ ಸೇರಿಸ್ಕೊಂಡ್ರೂ ಅದೃಷ್ಟವೇನೂ ಬದಲಾಗಲಿಲ್ಲ.
ಆದರೆ ಈಗ ರಹಸ್ಯ ಎಂಬ ಚಿತ್ರದ ಕೇಂದ್ರ ಬಿಂದುವಾಗಿ ಆಕೆ ಕಾಣಿಸಿಕೊಳ್ಳುತ್ತಿದ್ದು ಇದೇ ತಿಂಗಳ ಕೊನೆಗೆ ಚಿತ್ರ ಬಿಡುಗಡೆಯಾಗುತ್ತಿದೆ. ರಹಸ್ಯ ಚಿತ್ರದ ಟೈಟಲ್ ನೋಡಿ ಕನ್ನಡದಲ್ಲಿ ಬರುತ್ತಿದ್ದ ಸೆಕ್ಸ್ ಎಜುಕೇಶನ್ ಕೆಟಗಿರಿ ಚಿತ್ರ ಅಂದುಕೊಳ್ಳಬೇಡಿ. ಇದು ದೇಶವನ್ನೇ ಅಲುಗಾಡಿಸಿದ್ದ ಅರುಷಿ ತಲ್ವಾರ್ ಕೊಲೆ ಪ್ರಕರಣವನ್ನು ಆಧರಿಸಿ ಮಾಡಿರುವ ಸಿನಿಮಾ. ಕೆಕೆ ಮೆನನ್ ಕೂಡ ನಟಿಸುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಮಲ್ಟಿಪ್ಲೆಕ್ಸ್ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


