ಸಹೋದರಿಯ ನೋಡಲು 15 ವರ್ಷ ಬೇಕಾಯಿತೇ ಈ ಬಾಲಿವುಡ್ ನಟನಿಗೆ..?
ಬಾಲಿವುಡ್ ನಟನೊಬ್ಬ ತನ್ನ ಸಹೋದರಿಯನ್ನು ನೋಡಲು ಬರೊಬ್ಬರಿ 15 ವರ್ಷಗಳೇ ಬೇಕಾಯಿತು ಎಂದರೆ ನೀವು ನಂಬಲೇಬೇಕು..

ಮುಂಬೈ: ಅಣ್ಣ ತಂಗಿಯ ಬಾಂಧ್ಯವ್ಯವನ್ನು ಸಾರುವಂತಹ ನೂರಾರು ಚಿತ್ರಗಳು ಬಾಲಿವುಡ್ ನಲ್ಲಿ ಬಂದುಹೋಗಿವೆ. ಆದರೆ ಇದೇ ಬಾಲಿವುಡ್ ನಟನೊಬ್ಬ ತನ್ನ ಸಹೋದರಿಯನ್ನು ನೋಡಲು ಬರೊಬ್ಬರಿ 15 ವರ್ಷಗಳೇ ಬೇಕಾಯಿತು ಎಂದರೆ ನೀವು ನಂಬಲೇಬೇಕು.
ಇಷ್ಟಕ್ಕೂ ಯಾರಪ್ಪ ಈ ನಟ ಅಂದರೆ ಆತ ಬೇರಾರು ಅಲ್ಲ ಖ್ಯಾತ ಗೀತರಚನೆಕಾರ, ಗಾಯಕ ಮುಖೇಶ್ ಅವರ ಮೊಮ್ಮಗ ಮತ್ತು ಬಾಲಿವುಡ್ ನ ಖ್ಯಾತ ನಟ ನೀಲ್ ನಿತಿನ್ ಮುಖೇಶ್. ಖಳನಾಯಕನಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ನೀಲ್ ನಿತಿನ್ 2007 ರಲ್ಲಿ ಜಾನಿ ಗದ್ದರ್ ಚಿತ್ರದ ಮೂಲಕ ಹೀರೊ ಆಗಿ ಕಾಣಿಸಿಕೊಂಡರು. ಆ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ ಈ ನಟ ಜೈಲ್, ನ್ಯೂಯಾರ್ಕ್, ಲಫಂಗೆ ಪರಿಂದೇ ಮೊದಲಾದ ಚಿತ್ರಗಳಲ್ಲಿ ನಟಿಸಿದರು. ಆದರೆ ಅದೃಷ್ಟ ಮಾತ್ರ ನೀಲ್ ಕೈಹಿಡಿಯಲಿಲ್ಲ.
ತಮಿಳಿನ ಸೂಪರ್ ಹಿಟ್ ಕತ್ತಿ ಚಿತ್ರದಲ್ಲಿ ಕಾರ್ಪೊರೇಟ್ ವಿಲನ್ ಆಗಿ ಕಾಣಿಸಿಕೊಂಡಿದ್ದ ನೀಲ್ ಕೊನೆಗೂ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ನೀಲ್ ಗೆ ಬಾಲಿವುಡ್ ನಲ್ಲಿ ಅವಕಾಶಗಳು ಕೈಬೀಸಿ ಕರೆಯುತ್ತಿವೆ. ನೀಲ್ ನಿತಿನ್ ಸದ್ಯ ಸಲ್ಮಾನ್ ಖಾನ್ ಜೊತೆ ಪ್ರೇಮ್ ರತನ್ ಧನ್ ಪಾಯೋ ಚಿತ್ರದಲ್ಲಿ ನಟಿಸುತ್ತಿದ್ದು, ಇದೇ ಚಿತ್ರದ ಚಿತ್ರೀಕರಣಕ್ಕಾಗಿ ಸಿಂಗಪೂರ್ ತೆರಳಿದ್ದ ನೀಲ್ ನಿತಿನ್ ಗೆ ಈ ವೇಳೆ ತಮ್ಮ ಸಹೋದರಿ (ಚಿಕ್ಕಪ್ಪ ಅಥವಾ ದೊಡ್ಡಪ್ಪನ ಮಗಳು) ಸಿಂಗಪೂರದಲ್ಲಿ ವಾಸಿಸುತ್ತಿರುವುದು ನೆನಪಾಗಿದೆ. ಕೂಡಲೇ ಸಹೋದರಿ ಮನೆಗೆ ತೆರಳಿದ ನೀಲ್ ಆಕೆಯ ಕುಟುಂಬದೊಂದಿಗೆ 7 ದಿನಕಳೆದಿದ್ದಾರೆ. ಅಲ್ಲಕೆ ಕುಟುಂಬದ ಪ್ರತಿಯೊಬ್ಬರನ್ನೂ ಚಿತ್ರೀಕರಣಕ್ಕೆ ಕರೆದುಕೊಂಡು ಹೋದರಂತೆ.
15 ವರ್ಷಗಳ ನಂತರ ಸಹೋದರಿಯನ್ನು ನೋಡಿದ ನೀಲ್ ಇನ್ನು ಮುಂದೆ ಇಷ್ಟೊಂದು ಗ್ಯಾಪ್ ಕೊಡಲ್ಲ. ಆಗಾಗ ಬಂದು ಹೋಗುತ್ತೇನೆ ಅಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


