'ಕ್ವಾಂಟಿಕೊ' ನಂತರ ಮನೆಗೆ ಹಿಂದಿರುಗಿದ ಪೀಸೀ
ಅಮೇರಿಕಾ ಧಾರಾವಾಹಿ 'ಕ್ವಾಂಟಿಕೋ'ಗಾಗಿ ಸುದೀರ್ಘ ಕಾಲದವರೆಗೆ ದೇಶದಿಂದ ದೂರ ಉಳಿದಿದ್ದ ನಟಿ ಪ್ರಿಯಾಂಕ ಚೋಪ್ರಾ ಮನೆಗೆ ಮರಳಿದ್ದಾರೆ.

ನವದೆಹಲಿ: ಅಮೇರಿಕಾ ಧಾರಾವಾಹಿ 'ಕ್ವಾಂಟಿಕೋ'ಗಾಗಿ ಸುದೀರ್ಘ ಕಾಲದವರೆಗೆ ದೇಶದಿಂದ ದೂರ ಉಳಿದಿದ್ದ ನಟಿ ಪ್ರಿಯಾಂಕ ಚೋಪ್ರಾ ಮನೆಗೆ ಮರಳಿದ್ದಾರೆ.
ಅಮೇರಿಕಾದ ಮಾಂಟ್ರೀಯಲ್ ನಲ್ಲಿ 'ಕ್ವಾಂಟಿಕೋ' ಚಿತ್ರೀಕರಣದಲ್ಲಿ ನಿರತರಾಗಿದ್ದ ೩೩ ವರ್ಷದ ನಟಿ ಟ್ವಿಟ್ಟರ್ ನಲ್ಲಿ "ಮನೆಗೆ ಹಿಂದಿರುಗಲು ಎಷ್ಟು ಖುಷಿಯಾಗುತ್ತಿದೆ. ಹೃದಯವಿರುವಲ್ಲಿಯೇ ಮನೆ. ನಾನು ಮನೆಗೆ ಹಿಂದಿರುಗಿದ್ದೇನೆ.. #ಮುಂಬೈ" ಎಂದು ಬರೆದಿದ್ದಾರೆ.
ಎಬಿಸಿ ಸೀರಿಸ್ ನಿರ್ಮಿಸಿದ ಈ ಧಾರಾವಾಹಿಯಲ್ಲಿ ಪ್ರಿಯಾಂಕ ಎಫ್ ಬಿ ಐ ಏಜೆಂಟ್ ಪಾತ್ರ ನಿರ್ವಹಿಸಿದ್ದರು ಹಾಗೂ ಇವರ ಅಭಿನಯಕ್ಕೆ ಜಾಗತಿಕವಾಗಿ ಪ್ರಶಂಸೆ ವ್ಯಕ್ತವಾಗಿತ್ತು.
'ಮೇರಿ ಕೋಮ್' ನಟಿ ಸದ್ಯಕ್ಕೆ ಬಿಡುಗಡೆಯಾಗಿರುವ ತಮ್ಮ ಚಿತ್ರ 'ಬಾಜಿರಾವ್ ಮಸ್ತಾನಿ' ಸಿನೆಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡ ನಟಿಸಿರುವ ಈ ಚಿತ್ರವನ್ನು ಸಂಜಯ್ ಲೀಲಾ ಭನ್ಸಾಲಿ ನಿರ್ದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


