ಬಾಲಿವುಡ್

ನಾನು ಖಗೋಳಶಾಸ್ತ್ರಜ್ಞೆ ಆಗಬೇಕೆಂದಿದ್ದೆ: ಸೋನಾಕ್ಷಿ

ವಸ್ತ್ರವಿನ್ಯಾಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ, ಖಗೋಳಶಾಸ್ತ್ರಜ್ಞೆ ಆಗಲು ಬಯಸಿದ್ದೆ ಆದರೆ ವಿಧಿ ಫ್ಯಾಶನ್ ನಿಂದ

ನಾನು ಖಗೋಳಶಾಸ್ತ್ರಜ್ಞೆ ಆಗಬೇಕೆಂದಿದ್ದೆ: ಸೋನಾಕ್ಷಿ
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ
Published On :

ಮುಂಬೈ: ವಸ್ತ್ರವಿನ್ಯಾಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ, ಖಗೋಳಶಾಸ್ತ್ರಜ್ಞೆ ಆಗಲು ಬಯಸಿದ್ದೆ ಆದರೆ ವಿಧಿ ಫ್ಯಾಶನ್ ನಿಂದ ಸಿನೆಮಾಗೆ ಎಳೆದು ತಂದಿತು ಎಂದಿದ್ದಾರೆ.

ಸಲ್ಮಾನ್ ಖಾನ್ ಅವರ 'ದಭಾಂಗ್' ಮೂಲಕ ೨೦೧೦ ರಲ್ಲಿ ನಟಿಯಾಗಿ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನೆಮಾ ಪಾದರ್ಪಣೆ ಮಾಡಿದ್ದರು.

ಅವರೇ ಸಂದರ್ಶನವೊಂದರಲ್ಲಿ ತಿಳಿಸಿರುವಂತೆ "ಪ್ರಾಮಾಣಿಕವಾಗಿ ನಾನು ಖಗೋಳಶಾಸ್ತ್ರಜ್ಞೆ ಆಗಬೇಕೆಂದಿದ್ದೆ, ನನ್ನ ಗಣಿತ ಜ್ಞಾನ ಎಷ್ಟು ಕೆಟ್ಟದಾಗಿತ್ತೆಂದರೆ ಯಾವ ಸಂಸ್ಥೆಯೂ ನನಗೆ ಪ್ರವೇಶ ನೀಡುತ್ತಿರಲಿಲ್ಲ. ನನಗೆ ಕ್ರೀಡೆಗಳು ಇಷ್ಟ. ಈಜಾಡಲು ಇಷ್ಟ, ಟೆನಿಸ್ ಆಡುತ್ತೇನೆ. ಆದುದರಿಂದ ಈಜುಗಾರ್ತಿಯಾಗಲೂ ಬಯಸಿದ್ದೆ.

ಫ್ಯಾಶನ್ ವಿನ್ಯಾಸಕಾರ್ತಿಯಾಗಿ, ನನಗೆ ಚಿತ್ರ ಬಿಡಿಸಲು ಕೂಡ ಬರುತ್ತಿದ್ದು, ಆದುದರಿಂದ ಕಲಾವಿದೆ ಯಾಕಾಗಬಾರದು ಎಂದು ತಿಳಿದಾಗ ಕೊನೆಗೆ ನಟಿಯಾಗಿ ಉಳಿದೆ. ನನ್ನ ವೃತ್ತಿ ಜೀವನ ಆಯ್ಕೆ ಮಾಡುವುವಾಗ ಹಲವಾರು ಬಗೆಯ ಜನರು ಸ್ಫೂರ್ತಿ ನೀಡಿದ್ದಾರೆ. ನಾನು ಧೈರ್ಯದ ಹುಡುಗಿ" ಎಂದಿದ್ದಾರೆ.

'ದಭಾಂಗ್' ಸಂಭಾಷಣೆ ಮೂಲಕ ಜನರ ನಡುವೆ ಪ್ರಸಿದ್ಧಳಾದ ನಟಿ ಈಗ ಸದ್ಯಕ್ಕೆ 'ಅಕಿರಾ' ಮತ್ತು 'ಫೋರ್ಸ್ ೨' ಸಿನೆಮಾಗಳಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.