ರಾಣಿ ಮುಖರ್ಜಿ, ಆದಿತ್ಯ ಚೋಪ್ರಾಗೆ ಹೆಣ್ಣು ಮಗು
ನಟಿ ರಾಣಿ ಮುಖರ್ಜಿ ಮತ್ತು ನಿರ್ದೇಶಕ-ನಿರ್ಮಾಪಕ ಆದಿತ್ಯ ಚೋಪ್ರಾ ಅವರಿಗೆ ಬುಧವಾರ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಅದಿರಾ ಎಂದು ಕರೆದಿದ್ದಾರೆ. ಈ ಮಗು

ಮುಂಬೈ: ನಟಿ ರಾಣಿ ಮುಖರ್ಜಿ ಮತ್ತು ನಿರ್ದೇಶಕ-ನಿರ್ಮಾಪಕ ಆದಿತ್ಯ ಚೋಪ್ರಾ ಅವರಿಗೆ ಬುಧವಾರ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಅದಿರಾ ಎಂದು ಕರೆದಿದ್ದಾರೆ. ಈ ಮಗು ದೇವರ ಅತಿ ದೊಡ್ಡ ಉಡುಗೊರೆ ಎಂದು ರಾಣಿ ಬಣ್ಣಿಸಿದ್ದಾರೆ.
ಆರೋಗ್ಯಕರವಾಗಿರುವ ಮಗು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಜನಿಸಿದೆ.
"ನನ್ನ ಹಿತೈಷಿಗಳು ಹಾಗು ಅಭಿಮಾನಿಗಳಿಗೆ ಧನ್ಯವಾದಗಳು" ಎಂದು ಯಶ್ ರಾಜ್ ಫಿಲಂಸ್ ಸಂಸ್ಥೆ ನೀಡಿರುವ ಹೇಳಿಕೆಯಲ್ಲಿ ರಾಣಿ ತಿಳಿಸಿದ್ದಾರೆ.
"ನಮಗೆ ಇಂದು ದೇವರು ಅತಿ ದೊಡ್ಡ ಉಡುಗೊರೆಯಾಗಿ ಅದಿರಾಳನ್ನು ನೀಡಿದ್ದಾನೆ. ನಮ್ಮ ಅಭಿಮಾನಿಗಳು, ಗೆಳೆಯರು ಮತ್ತು ಹಿತೈಷಿಗಳು ನೀಡಿದ ಅಪರಿಮಿತ ಬೆಂಬಲಕ್ಕೆ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು. ಈ ಖುಷಿಯಿಂದ ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದೆ" ಎಂದು ಕೂಡ ಅವರು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಸಂಬಂಧದಲ್ಲಿದ್ದ ರಾಣಿ ಮತ್ತು ಆದಿತ್ಯ ಏಪ್ರಿಲ್ ೨೦೧೪ರಲ್ಲಿ ಇಟಲಿಯಲ್ಲಿ ಮದುವೆಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


